Urdu   /   English   /   Nawayathi

ಬೆಳಗಾವಿಯಲ್ಲಿ ಶ್ರೀಮಂತ ವ್ಯಕ್ತಿಯ ಅಪಹರಣ... 90 ದಿನಗಳ ಬಳಿಕ ಮುಂದೇನಾಯ್ತು?

share with us

ಬೆಳಗಾವಿ: 09 ಮೇ 2020 (ಫಿಕ್ರೋಖಬರ್ ಸುದ್ದಿ) ಶ್ರೀಮಂತ ವ್ಯಕ್ತಿಯೋರ್ವನನ್ನು ಅಪಹರಿಸಿ ಮಹಾರಾಷ್ಟ್ರದ ಗಡಹಿಂಗ್ಲೆಜ್ ತಾಲೂಕಿನ‌ ಕಡಲಗೆ ಗ್ರಾಮದಲ್ಲಿ ಕೂಡಿ ಹಾಕಿದ್ದ 9 ಜನ ಅಪಹರಣಕಾರರನ್ನು‌ ಮೂರು ತಿಂಗಳ ಬಳಿಕ ಬೆಳಗಾವಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ‌. ಗರದ ಬಾಂದೂರ್ ಗಲ್ಲಿಯ ಅಣ್ಣಾಸಾಹೇಬ್ ಶ್ರೀಕಾಂತ್ ಚೌಗುಲೆ (48)‌‌ ಎಂಬುವವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ನಗರದ ದೇಶಪಾಂಡೆ ಪೆಟ್ರೋಲ್ ಬಂಕ್ ಸಮೀಪದ ಹೋಟೆಲ್​ಗೆ ಉಪಹಾರ ತರಲು ಹೋಗಿದ್ದ ಶ್ರೀಕಾಂತ್ ಅವರನ್ನು ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿಕೊಂಡು ಹೋಗಿದ್ದರು. ಮಹಾರಾಷ್ಟ್ರದ ಬೆಳವಟ್ಟಿ ಗ್ರಾಮದ‌ ಚೇತನ ಪಾಟೀಲ್​​ ಎಂಬುವವರ ಫಾರ್ಮ್ ಹೌಸ್​ನಲ್ಲಿ 40 ದಿನ ಹಾಗೂ 30 ದಿನ ಸುರೇಶ್​ ಪಾಟೀಲ್​ ಎಂಬುವವರ ಮನೆಯಲ್ಲಿ ಬಂಧಿಸಿಡಲಾಗಿತ್ತು. ಈ ವೇಳೆ ಠೇವಣಿ ಹಣ ವಿತ್ ಡ್ರಾ ಮಾಡಿಕೊಡುವಂತೆ ಹಾಗೂ 3 ಎಕರೆ ಜಮೀನು ‌ನಮ್ಮ‌ ಹೆಸರಿಗೆ ಮಾಡಿಕೊಡುವಂತೆ ಪೀಡಿಸಿದ್ದಾರೆ. ಇದಕ್ಕಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಜಮೀನು ‌ಪತ್ರದ ಮೇಲೂ ಸಹಿ ಮಾಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿಯ ಮಾರ್ಕೆಟ್ ವಿಭಾಗದ ಎಸಿಪಿ ಎನ್.ವಿ. ಬರಮನಿ ನೇತೃತ್ವದ ತಂಡ ಅಪಹರಣಕಾರರನ್ನು ಬಂಧಿಸಿ ಅಣ್ಣಾಸಾಹೇಬ್ ಶ್ರೀಕಾಂತ್ ಚೌಗುಲೆ ಅವರನ್ನು ರಕ್ಷಿಸಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ವಿನಾಯಕ ಪ್ರಧಾನ್, ಗಾಂಧಿನಗರದ ಶಿವನಾಥ್ ರೇಡೆಕರ್, ಮುರಾರಿ ಖಾನಾಪುರೆ, ಪುಲ್ಬಾ ಗಲ್ಲಿಯ‌ ಅಮಿತ್ ಮಜಗಾಂವಿ,‌ ರೈತ ಗಲ್ಲಿಯ ಅಮಿತ್ ಧಾಮನೆಕರ, ಅನಗೋಳದ ಸಂಜಯ್ ಕೌಜಲಗಿ, ಮಾರುತಿ ನಗರದ ರಾಜು ಗೋಣಿ, ಚೇತನ್ ಪಾಟೀಲ ಹಾಗೂ ಗಡಹಿಂಗ್ಲೇಜ್ ಕಡಲಗೆ ಗ್ರಾಮದ ಸುರೇಶ ಪಾಟೀಲ ಎಂಬುವವರನ್ನು‌ ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಕಾರು, 2.5 ಲಕ್ಷ ಮೌಲ್ಯದ 5 ಬೈಕ್​​ಗಳು, 11 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ‌.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا