Urdu   /   English   /   Nawayathi

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಲೈನ್ ಗೆ ಗ್ರೀನ್ ಸಿಗ್ನಲ್: ವನ್ಯಜೀವಿ ಮಂಡಳಿ, ಅರಣ್ಯ ಅಧಿಕಾರಿಗಳಿಂದ ವಿರೋಧ!

share with us

ಹುಬ್ಬಳ್ಳಿ-ಅಂಕೋಲಾ: 04 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ರೈಲ್ವೆ ಲೈನ್ಗೆ ಒಂದೆಂಡೆ ಗ್ರೀನ್ ಸಿಗ್ನಲ್ ದೊರೆತಿದ್ದರೆ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ, ವನ್ಯಜೀವಿ ಸಂರಕ್ಷಣಾವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವಾರ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ 13ನೇ ಸಭೆ ನಿಗದಿಯಾಗಿದ್ದು, ಈ ನಡುವೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಲೈನ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ವನ್ಯಜೀವಿ ಸಂರಕ್ಷಣಾವಾದಿಗಳು ಅರಣ್ಯ ಅಧಿಕಾರಿಗಳು ತೀವ್ರ ಆತಂಕ, ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರಗಳ ವಿವಿಧ ಅಧಿಕಾರಿಗಳು ತಿರಸ್ಕರಿಸಿದ್ದರೂ ಸಹ ಪುನಃ ಪ್ರಸ್ತಾವನೆ ಜೀವ ಪಡೆದುಕೊಂಡಿದೆ.  20 ವರ್ಷಗಳಷ್ಟು ಹಳೆಯ ಯೋಜನೆಯಾಗಿರುವ ಹುಬ್ಬಳ್ಳಿ-ಅಂಕೋಲ ರೈಲ್ವೆ ಲೈನ್ ಯೋಜನೆಗಾಗಿ ಕಾರವಾರ, ಯೆಲ್ಲಾಪುರ, ಧಾರವಾಡದಲ್ಲಿ ಬರೊಬ್ಬರಿ 2.2 ಲಕ್ಷ ಮರಗಳನ್ನು ಕತ್ತರಿಸಬೇಕಾಗುತ್ತದೆ. ರೈಲ್ವೆ ಮಾರ್ಗ ಹಾದು ಹೋಗುವ ಕಾಡಿನ ಪ್ರದೇಶ ಪರಿಸರದ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿದ್ದು, ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಕುಲದಿಂದ ಕೂಡಿದೆ. ಯೋಜನೆಗೆ ಅನುಮೋದನೆ ದೊರೆತು ಪ್ರಾರಂಭವಾಗಿದ್ದೇ ಆದಲ್ಲಿ, ಈ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಚಕಾರ ಬರುವುದರ ಜೊತೆಗೆ ಕಾಳಿ ಕಣಿವೆಯಲ್ಲಿರುವ ನದಿಗಳ ಸಹಜ ಹರಿವಿನ ಮೇಲೂ ಪರಿಣಾಮ ಬೀರಲಿದೆ. ಈ ಮೂಲಕ ಕರ್ನಾಟಕದ ಸ್ವಾಭಾವಿಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಹವಾಮಾನ ಬದಲಾವಣೆಗೂ ಕಾರಣವಾಗಲಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಯೋಜನೆಯನ್ನು ವಿರೋಧಿಸುವವರ ಪೈಕಿ ಮುಂಚೂಣಿಯಲ್ಲಿರುವ ಮಾಜಿ ಮುಖ್ಯ ವನ್ಯಜೀವಿ ವಾರ್ಡನ್ ಕಾಳಿ ಹುಲಿ ಮೀಸಲು ಪ್ರದೇಶಕ್ಕೆ (ಕೆಟಿಆರ್) 2008 ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. ಆಗಿನಿಂದ ಕಣ್ಣಿಗೆ ಕಾಣುವಂತಹ ಗಮನಾರ್ಹ ಬೆಳವಣಿಗೆಗಳಾಗಿವೆ. ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ ಕೆಟಿಆರ್ ಹುಲಿ ಹಾಗೂ ಆನೆಗಳಿಗೆ ಅತ್ಯುತ್ತಮ ಅತ್ಯುತ್ತಮ ಆವಾಸಸ್ಥಾನವಾಗಲಿದೆ. ಕಾಳಿ ಕಣಿವೆಯ ಉತ್ತರ ಭಾಗಕ್ಕೆ ಕೆಟಿಆರ್ ಬಂದರೆ ರೈಲ್ವೆ ಯೋಜನೆ ದಕ್ಷಿಣ ಭಾಗಕ್ಕೆ ಇರಲಿದೆ. ಕೊಡಸಲ್ಲಿ / ಕದ್ರಾ ಅಣೆಕಟ್ಟುಗಳು ಮತ್ತು ಕೈಗಾ ಯೋಜನೆಗಳ ನಂತರ ಇಡೀ ಭೂಪ್ರದೇಶದಲ್ಲಿ ಪ್ರತಿಕೂಲ ಬದಲಾವಣೆಗಳಾಗಿವೆ. ಈಗ ರೈಲು ಮಾರ್ಗ ಬಂದರೆ ವಣ್ಯ ಸಂಕುಲ, ಕಣಿವೆ ಕಾಳಿ ನದಿಯ ಜಲಾನಯನ ಪ್ರದೇಶಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಈ ಯೋಜನೆಯನ್ನು ತಿರಸ್ಕರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳು ನಡೆಸಿರುವ ಅಧ್ಯಯನದ ಪ್ರಕಾರ ಇದೇ ಪ್ರದೇಶದಲ್ಲಿ ಮೂರು ರೈಲು ಸಂಪರ್ಕವಿದ್ದು, ಹೆದ್ದಾರಿಯೂ ಇರುವುದರಿಂದ ಈ ರೈಲ್ವೆ ಯೋಜನೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ತಿಳಿದುಬಂದಿದೆ. ವಾಸ್ಕೊ ಲೈನ್ ಕಾರವಾರ ಪೋರ್ಟ್ ನಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಆದ್ದರಿಂದ ಈ ಹೊಸ ಮಾರ್ಗದಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا