Urdu   /   English   /   Nawayathi

ರೌಡಿಗಳಿಂದ ಸಿವಿಲ್ ವ್ಯಾಜ್ಯ ಇತ್ಯರ್ಥವಾಗುತ್ತಿರುವ ವಿಚಾರ ವಿಧಾನಸಭೆಯಲ್ಲಿ ಚರ್ಚೆ

share with us

ಬೆಂಗಳೂರು: 04 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ನಗರದ ಬಹಳಷ್ಟು ಸಿವಿಲ್ ಕೇಸ್‍ಗಳು ರೌಡಿಗಳ ಮೂಲಕ ಇತ್ಯರ್ಥವಾಗುತ್ತಿರುವ ವಿಚಾರ ವಿಧಾನಸಭೆ ಯಲ್ಲಿಂದು ಚರ್ಚೆಗೆ ಗ್ರಾಸವಾಯಿತು.  ಸಂವಿಧಾನದ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಅವರು, ಬೆಂಗಳೂರಿನ ಬಹಳಷ್ಟು ಸಿವಿಲ್ ಕೇಸ್‍ಗಳಲ್ಲಿ ರಾಜಕಾರಣಿಗಳ ಬಳಿ ಬರುತ್ತಾರೆ. ರಾಜಕಾರಣಿಗಳು ಬ್ಯುಸಿಯಾಗಿದ್ದರೆ ರೌಡಿಗಳು, ಪೊಲೀಸರ ಹತ್ತಿರ ಹೋಗುತ್ತಾರೆ. ರೌಡಿಗಳು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಅನುಷ್ಠಾನ ಮಾಡುತ್ತಾರೆ. ಆಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಮೇಶ್‍ಕುಮಾರ್ ಮಧ್ಯಪ್ರವೇಶಿಸಿ ಅವರನ್ನು ರೌಡಿಗಳು ಎನ್ನಬೇಡಿ. ಧರ್ಮದಾತರು. ರಿಯಲ್ ಎಸ್ಟೇಟ್ ಏಜೆಂಟ್ ಏನಾದರೂ ಹೇಳಿ. ಅವರು ಗೌರವಸ್ಥರು ಸೆಂಟಲ್‍ಮೆಂಟ್ ಮಾಡುವವರು. ನಾವು, ಅವರು, ಪೊಲೀಸರು ಒಟ್ಟಿಗೆ ಸೇರಿ ಮಾಡುತ್ತಿದ್ದೇವೆ ಎಂದರು. ಆಗ ಕಾನೂನು ವ್ಯವಹಾರಗಳ ಸಚಿವ ಮಾಧುಸ್ವಾಮಿ, ವರ್ಷಗಟ್ಟಲೇ ಕಾಯುವುದರ ಬದಲು ತೀರ್ಮಾನವಾಗುತ್ತದೆ ಎಂಬ ಉದ್ದೇಶ ದಿಂದ ಆ ರೀತಿ ಮಾಡಬಹುದೇನೋ ಎಂದರು. ಇದಕ್ಕೂ ಮುನ್ನ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಮಾನ ನ್ಯಾಯ ಕೊಡಲು ಸಾಧ್ಯವಾಗಿದೆಯೇ? ದೇಶದಲ್ಲಿ ಸುಮಾರು 2.26 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಾಧೀಶರ ನೇಮಕವು ಆಗುತ್ತಿಲ್ಲ. ಬೇರೆ ದೇಶದಲ್ಲಿ 10 ಲಕ್ಷ ಜನಸಂಖ್ಯೆಗೆ 50 ನ್ಯಾಯಾಧೀಶರಿದ್ದರೆ ನಮ್ಮ ದೇಶದಲ್ಲಿ 10 ಲಕ್ಷಕ್ಕೆ 10 ನ್ಯಾಯಾಧೀಶರಿದ್ದಾರೆ. ನ್ಯಾಯಾಧೀಶರ ಸಂಖ್ಯೆ ಹೆಚ್ಚಳ ಮಾಡಿಲ್ಲ. ಸೂಕ್ತ ಮೂಲಸೌಕರ್ಯವನ್ನು ಒದಗಿಸಿಲ್ಲ. ಅತಿಹೆಚ್ಚು ವ್ಯಾಜ್ಯಗಳು ಸರ್ಕಾರಕ್ಕೆ ಸಂಬಂಧಿಸಿರುತ್ತವೆ ಅಂದರೆ ಶೇ.35ರಷ್ಟಿವೆ. 10 ವರ್ಷದಷ್ಟು ಹಳೆಯ ಕೇಸ್‍ಗಳಿವೆ. ಅಮೂಲಾಗ್ರ ಅಥವಾ ಕ್ರಾಂತಿಕಾರಕ ಬದಲಾವಣೆಯಾಗಬೇಕಿದೆ. ಸಂವಿಧಾನ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಮಾಡಿದರು. ದೇಶದ 20 ರಾಜ್ಯಗಳಲ್ಲಿ ಮಾನವ ಹಕ್ಕುಗಳ ಕಾಯ್ದೆಗೆ ಸಂಬಧಿಸಿದಂತೆ ನಿಯಮಾವಳಿಗಳೇ ರಚನೆಯಾಗಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾನವ ಹಕ್ಕುಗಳ ನಿಯಮಾವಳಿಗಳನ್ನು ರಚಿಸಲಾಯಿತು ಎಂದರು.  ಆಗ ಮತ್ತೆ ಮಧ್ಯಪ್ರವೇಶಿಸಿದ ಮಾಧುಸ್ವಾಮಿ, ಮಾನವ ಹಕ್ಕುಗಳ ಉಲ್ಲಂಘನೆ ದೂರುಗಳ ಬಗ್ಗೆ ಒಂದು ದಿನ ಚರ್ಚೆ ಮಾಡಬೇಕು ಎಂಬ ಸಲಹೆಯನ್ನು ಮಾಡಿದರು. ಮಾತು ಮುಂದುವರೆಸಿದ ಚ್.ಕೆ.ಪಾಟೀಲ್ ಅವರು, ಸಂವಿಧಾನ, ಮಾನವ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا