Urdu   /   English   /   Nawayathi

ಕಟ್ಟಡ-ಮರಗಳಿಗೆ ಸಿಕ್ಕಿಲ್ಲ ಪರಿಹಾರ

share with us

ಕಾರವಾರ: 03 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಮಾಜಾಳಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಸ್ತರಣೆ ಗುತ್ತಿಗೆ ಪಡೆದ ಐಆರ್​ಬಿ ಕಂಪನಿಯು ಜಿಲ್ಲೆಯ ಮೂರು ಕಡೆ ಟೋಲ್ ಶುಲ್ಕ ವಸೂಲಿ ಆರಂಭಿಸಿದೆ. ಆದರೆ, ಚತುಷ್ಪಥಕ್ಕಾಗಿ ಭೂಮಿ ಬಿಟ್ಟುಕೊಟ್ಟವರಿಗೆ ಇದುವರೆಗೂ ಸಂಪೂರ್ಣ ಹಣ ಬಾರದೇ ಇರುವುದು ಭೂ ಮಾಲೀಕರ ಆತಂಕಕ್ಕೆ ಕಾರಣವಾಗಿದೆ. ಕಾರವಾರದ ಮಾಜಾಳಿ, ಸದಾಶಿವಗಡ, ಬಾಡ, ಬಿಣಗಾ, ಚೆಂಡಿಯಾ, ಅರಗಾ, ಅಮದಳ್ಳಿ ಸೇರಿ 9 ಗ್ರಾಮಗಳ 90ಕ್ಕೂ ಹೆಚ್ಚು ಭೂ ಮಾಲೀಕರಿಗೆ ಭೂಮಿಯ ಮೌಲ್ಯ, ಸರ್ಕಾರಿ ಮೌಲ್ಯ ಆಧರಿಸಿ ಪರಿಹಾರ ನೀಡಲಾಗಿದೆ. ಆದರೆ, ಮರ, ಮನೆ, ಕಾಂಪೌಂಡ್ ಮುಂತಾದ ಸ್ವತ್ತುಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ತೋಟಗಾರಿಕೆ, ಪಿಡಬ್ಲ್ಯುಡಿ ಅಧಿಕಾರಿಗಳು ಮೌಲ್ಯಮಾಪನ ಮಾಡಿಕೊಂಡು ಹೋಗಿ ಒಂದು ವರ್ಷವಾಗಿದೆ. ಭೂ ಮಾಲೀಕರು ಎಲ್ಲ ದಾಖಲೆಗಳನ್ನೂ ನೀಡಿ, ಇಂದು-ನಾಳೆ ಪರಿಹಾರ ಸಿಗಲಿದೆ ಎಂದು ಕಚೇರಿಗೆ ಅಲೆದು ಸೋತಿದ್ದಾರೆ.

ಸಮಸ್ಯೆ ಆಗಿದ್ದೆಲ್ಲಿ?: ತಾಲೂಕಿನ ವಿವಿಧೆಡೆ ಭೂಸ್ವಾಧೀನಕ್ಕೆ ಗುರುತಾದ ಜಾಗಗಳ ಸ್ವತ್ತಿನ ಮೌಲ್ಯಮಾಪನಕ್ಕೆ ಸ್ಥಳೀಯರು ಆಕ್ಷೇಪಿಸಿದ್ದರು. ಶೀಘ್ರ ಭೂ ಸ್ವಾಧೀನ ಮಾಡಿ ಭೂಮಿಯನ್ನು ಗುತ್ತಿಗೆ ಕಂಪನಿಗೆ ಹಸ್ತಾಂತರಿಸಬೇಕಿತ್ತು. ಇದರಿಂದ ಮೊದಲ ಹಂತದಲ್ಲಿ ಸರ್ಕಾರಿ ಭೂಮಿಯ ಬೆಲೆಯನ್ನು ಮಾತ್ರ ನಿಗದಿ ಮಾಡಿ, ಪರಿಹಾರ ನೀಡಿ ಭೂ ಸ್ವಾಧೀನ ಮಾಡಲಾಯಿತು. ನಂತರ ಸ್ವತ್ತುಗಳ ಮೌಲ್ಯಮಾಪನ ಮಾಡಿ ಅದನ್ನು ಅನುಮೋದನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳಿಸಲಾಗಿದೆ ಎನ್ನುತ್ತಾರೆ ಕಾರವಾರ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಅಧಿಕಾರಿಗಳು.

ನ್ಯಾಯಾಲಯದಲ್ಲಿ ಜಮಾ: ತಾಲೂಕಿನಲ್ಲಿ ಸಹೋದರರ ವ್ಯಾಜ್ಯ ಅಥವಾ ವಾರಸುದಾರಿಕೆಯ ಸಂಬಂಧ ವಿವಾದ ಇರುವ ಭೂಮಿಗಳ ಹಣವನ್ನು ನ್ಯಾಯಾಲಯದಲ್ಲಿ ಜಮಾ ಮಾಡಿ ಭೂಮಿ ಸ್ವಾಧೀನಕ್ಕೆ ಪಡೆಯಲಾಗಿದೆ. ಇಂಥ 40ರಷ್ಟು ಪ್ರಕರಣಗಳಿದ್ದು, ಭೂ ಸ್ವಾಧೀನ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದೆ ಎನ್ನುತ್ತಾರೆ ಭೂ ಸ್ವಾಧೀನಾಧಿಕಾರಿ ಕಚೇರಿಯ ಅಧಿಕಾರಿಗಳು.

ಇನ್ನೂ ನಡೆದಿದೆಭೂ ಸ್ವಾಧೀನ ಪ್ರಕ್ರಿಯೆ
ಮಾಜಾಳಿಯಿಂದ-ಕುಂದಾಪುರವರೆಗೆ 141 ಕಿಮೀ ರಸ್ತೆ ನಿರ್ವಿುಸಲಾಗಿದೆ ಎಂದು ದಾಖಲೆಗಳನ್ನು ಒದಗಿಸಿ ಐಆರ್​ಬಿ ಕಂಪನಿ ಟೋಲ್ ಶುಲ್ಕ ಪ್ರಾರಂಭಿಸಿದೆ. ಆದರೆ, ಸದಾಶಿವಗಡದಲ್ಲಿ ಸರ್ಕಲ್, ಅಮದಳ್ಳಿ ರೈಲ್ವೆ ಗೇಟ್ ನಿರ್ಮಾಣ ಸಂಬಂಧ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಿದ್ಧ ಮಾಡಿ ಕಳಿಸಬೇಕಿದೆ. ಇನ್ನೂ ಸಾಕಷ್ಟು ಭೂಮಿ ಸ್ವಾಧೀನಕ್ಕೆ ಅವಾರ್ಡ್ ಆಗಬೇಕಿದೆ ಎಂಬುದು ಭೂ ಸ್ವಾಧೀನಾಧಿಕಾರಿ ಕಚೇರಿ ನೀಡುವ ಮಾಹಿತಿ.

ಭೂ ಸ್ವಾಧೀನದ ಅವಾರ್ಡ್ ಮಾಡುವಾಗ ಭೂಮಿ, ಮರ, ಮನೆ ಎಲ್ಲವನ್ನೂ ಸೇರಿಸಿ ಲೆಕ್ಕಾಚಾರ ಮಾಡಿ ಪರಿಹಾರ ನೀಡಲಾಗುತ್ತದೆ. ಹಾಗೊಮ್ಮೆ ಸೇರಿಲ್ಲ, ಪರಿಹಾರ ಸಿಕ್ಕಿಲ್ಲ ಎಂದಲ್ಲಿ ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಭೂ ಮಾಲೀಕರಿಗೆ ಮೇಲ್ಮನವಿ (ಆರ್ಬಿಟ್ರೇಷನ್ )ಮಾಡಲು ಅವಕಾಶವಿದೆ. ಯಾರಿಗೂ ಪರಿಹಾರ ನಷ್ಟವಾಗದು.
| ನಾಗರಾಜ ಸಿಂಗ್ರೇರ್ ಅಪರ ಜಿಲ್ಲಾಧಿಕಾರಿ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا