Urdu   /   English   /   Nawayathi

ಅಪಘಾತ ಪ್ರಕರಣ: ಕಡಬಕ್ಕೆ ಪೋಲೀಸ್ ಉನ್ನತ ಅಧಿಕಾರಿಗಳ ಆಗಮನ

share with us

ಕಡಬ: 03 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಬೈಕ್​ ಮತ್ತು ಮಿನಿ ಲಾರಿ ಡಿಕ್ಕಿ ಹೊಡೆದ ಪ್ರಕರಣದ ಮಾಹಿತಿ ಕಲೆ ಹಾಕಲು ಉನ್ನತ ಅಧಿಕಾರಿಗಳು ಇಂದು ಕಡಬಕ್ಕೆ ಭೇಟಿ ನೀಡಿದ್ದರು. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಮಾರ್ಚ್​ 1ರಂದು ಬೈಕ್​ ಮತ್ತು ಕೇರಳ ನೋಂದಣಿ ಹೊಂದಿರುವ ಮಿನಿ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಈ ವೇಳೆ ರಾಜಸ್ಥಾನದ ಸವಾಯ್ಮಾದ್ಪುರ್ ಜಿಲ್ಲೆಯ ಬಾನಾವಾಸ ತಾಲೂಕಿನ ಲಾಡ್ಪುರಿಯ ನಿವಾಸಿ ಮೇಘರಾಜ ಸ್ಥಳದಲ್ಲೇ ಮೃತಪಟ್ಟಿದ್ದನು. ಮೃತ ಮೇಘರಾಜ್ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿರುವ ರಾಜಸ್ಥಾನ ಮೂಲದ ಅನೂಪ್ ಸಿಂಗ್ ಎಂಬವರ ಜತೆ ಕೆಲಸ ಮಾಡಿಕೊಂಡಿದ್ದರು. ರವಿವಾರ ರಾತ್ರಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ರಾಜಸ್ಥಾನದಲ್ಲಿರುವ ಅವರ ಮನೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗಿದೆ.

Top officials visit, Top officials visit to kadaba, Top officials visit to kadaba for accident case, Top officials visit to kadaba news, ಉನ್ನತ ಅಧಿಕಾರಿಗಳು ಭೇಟಿ, ಅಪಘಾತ ಪ್ರಕರಣ ಸಂಬಂಧ ಉನ್ನತ ಅಧಿಕಾರಿಗಳು ಭೇಟಿ, ಅಪಘಾತ ಪ್ರಕರಣ ಸಂಬಂಧ ಕಡಬಕ್ಕೆ ಉನ್ನತ ಅಧಿಕಾರಿಗಳು ಭೇಟಿ,

ಕಡಬದಲ್ಲಿ ಕಾರ್ಮಿಕ ಮೃತಪಟ್ಟ ಪ್ರಕರಣ

ಈ ಮಧ್ಯೆ ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಂಡಿಲ್ಲ. ರಾಜಕೀಯ ಹಿನ್ನಲೆಯಿರುವ ಲಾರಿ ಮಾಲೀಕರಿಗೆ ಅನುಕೂಲವಾಗುವಂತೆ ಪ್ರಕರಣವನ್ನು ತಿರುವು ಮಾಡಿದ್ದಾರೆ. ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲೇ ಲಾರಿಯಲ್ಲಿದ್ದ ಮರಳನ್ನು ಸಮೀಪದ ಮನೆಯೊಂದರ ಬಳಿ ಖಾಲಿ ಮಾಡಿ ಲಾರಿಯನ್ನು ಮತ್ತೆ ಅಪಘಾತದ ಸ್ಥಳದಲ್ಲಿ ತಂದಿರಿಸಿದ್ದಾರೆ ಎಂದು ಮೇಘರಾಜ್ ಅವರ ಜೊತೆ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ಕಾರ್ಮಿಕರು ಆರೋಪಿಸಿ ಎಸ್​ಪಿ ಲಕ್ಷ್ಮೀ ಪ್ರಸಾದ್​ರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಎಸ್ಪಿ ನ್ಯಾಯಯುತವಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا