Urdu   /   English   /   Nawayathi

ಫುಟ್ಬಾಲ್ ಸ್ಟೇಡಿಯಂನಲ್ಲೂ ಮೊಳಗಿದ ಪೌರತ್ವದ ಕಿಚ್ಚು, ಪಂದ್ಯದ ವೇಳೆ ಪ್ರೇಕ್ಷಕರಿಂದ ಸ್ಲೋಗನ್​!

share with us

ಮಲಪ್ಪುರಂ(ಕೇರಳ): 07 ಜನುವರಿ 2020 (ಫಿಕ್ರೋಖಬರ್ ಸುದ್ದಿ) ದೇಶದೆಲ್ಲೆಡೆ ಹೊತ್ತಿಕೊಂಡ ಪೌರತ್ವ ಕಿಚ್ಚು ಇನ್ನೂ ಆರಿಲ್ಲ. ಎಲ್ಲಿಯವರೆಗೂ ಅಂದರೆ ಫುಟ್ಬಾಲ್​​​ ಪಂದ್ಯ ನಡೆಯುತ್ತಿದ್ದ ಮೈದಾನದಲ್ಲೂ ಪ್ರೇಕ್ಷಕರು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಕ್ಲಬ್​ ಮಿಲಾಷ್​ ಫುಟ್ಬಾಲ್​ ಪಂದ್ಯದ ಫೈನಲ್​ ಪಂದ್ಯದ ವೇಳೆ ನೆರೆದಿದ್ದ ಪ್ರೇಕ್ಷಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪ್ರೇಕ್ಷಕರು ಆಜಾದಿ ಘೋಷಣೆಗಳನ್ನು ಕೂಗುವ ಮೂಲಕ ಪೌರತ್ವ ಕಾಯ್ದೆಯನ್ನು ವಿರೋಧಿಸಿದರು. ಪಂದ್ಯವು ತ್ರಿವರ್ಣದ ಬೆಲೂನ್​ಗಳನ್ನು ಹಾರಿಸುವ ಮೂಲಕ ಆರಂಭಗೊಂಡಿತು. ಬಳಿಕ ಅಜಾದಿ ಘೋಷಣೆಗಳನ್ನು ಕೂಗಿ ಪೌರತ್ವ ಕಾಯ್ದೆ ವಿರುದ್ಧ ಧ್ವನಿ ಎತ್ತಲಾಯ್ತು. ಪಂದ್ಯ ನಡೆಯುತ್ತಿದ್ದ ವೇಳೆಯೂ ಸ್ಟೇಡಿಯಂ ತುಂಬೆಲ್ಲಾ ಘೋಷಣೆಗಳದ್ದೇ ಸದ್ದು ಕೇಳಿಬಂತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا