Urdu   /   English   /   Nawayathi

ನಮ್ಮ ಸಂಸ್ಕೃತಿಯಂತೆ ನಡೆದುಕೊಂಡಿದ್ದೇನೆ... ಪಾಕಿಸ್ತಾನದ ಸಂಸ್ಕೃತಿಯಂತ್ತಲ್ಲ... ಖಾದರ್​ ಸ್ಪಷ್ಟನೆ

share with us

ಮಂಗಳೂರು: 26 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಮಾಜಿ ಸಚಿವ ಯು.ಟಿ.ಖಾದರ್ ಸೈದ್ಧಾಂತಿಕವಾಗಿ ವಿಭಿನ್ನ ನಿಲುವು ಹೊಂದಿರುವವರು. ಆದರೆ, ನಿನ್ನೆ (ಡಿ.25) ಮಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಒಟ್ಟಾಗಿ ಕುಳಿತು ನಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಖಾದರ್​, ಸಮಾರಂಭ ಇತರ ಕಡೆಗಳಲ್ಲಿ ಸಿಕ್ಕಾಗ ಮಾತನಾಡುವುದು ನಮ್ಮ ಸಂಸ್ಕೃತಿ, ಅದಕ್ಕೆ ಸಿದ್ಧಾಂತವನ್ನು ಎಳೆಯಬಾರದು ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಒಬ್ಬೊಬ್ಬರ ವ್ಯಕ್ತಿತ್ವ ಒಂದು ರೀತಿ ಇರುತ್ತದೆ. ಪಾಕಿಸ್ತಾನ, ಅಫ್ಫಾನಿಸ್ತಾನ ಸಂಸ್ಕೃತಿಯ ಮಾತಗಳನ್ನು ಆಡಬಾರದು ಎಂದು ಪರೋಕ್ಷವಾಗಿ ಕಲ್ಲಡ್ಕ ಪ್ರಭಾಕರ ಭಟ್​ಗೆ ಕುಟುಕಿದ್ದಾರೆ. ಮಂಗಳೂರು ಗಲಭೆಯಲ್ಲಿ ತಕ್ಕಶಾಸ್ತಿಯಾಗಿದೆ ಎಂದು ಪ್ರಭಾಕರ ಭಟ್ ಈಚೆಗೆ​ ಹೇಳಿಕೆ ನೀಡಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا