Urdu   /   English   /   Nawayathi

ಯುವತಿಯರು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು: ಎಎಸ್‌ಪಿ ಲಾವಣ್ಯ

share with us

ಬಳ್ಳಾರಿ: 18 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಾಮಾಜಿಕ ಜಾಲತಾಣಗಳಿಂದ ಯುವತಿಯರು ದೂರವಿರಬೇಕೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಸೂಚನೆ ನೀಡಿದ್ದಾರೆ. ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಅಬ್ದುಲ್‌ ನಜೀರ್ ಸಾಬ್ ಸಭಾಂಗಣದಲ್ಲಿಂದು ನಡೆದ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ಕುರಿತು ಜಿಲ್ಲಾಮಟ್ಟದ ಸಾರ್ವಜನಿಕ‌ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು. ಜಿಲ್ಲಾದ್ಯಂತ ಅಪ್ರಾಪ್ತ ಬಾಲಕಿಯರ ಹಾಗೂ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂಥ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿದೆ ಎಂದು ತಿಳಿಸಿದ್ರು. ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಜಿಲ್ಲೆಯ ಸೈಬರ್‌ ಕೆಫೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಯುವತಿಯರು ಸೈಬರ್ ಕೆಫೆಯಲ್ಲಿ ಕುಳಿತು ಅನಾಮಧೇಯ ವ್ಯಕ್ತಿಯೊಂದಿಗೆ ಚಾಟ್ ಮಾಡಬಾರದು. ಅದರಿಂದ ನಿಮ್ಮ ಜೀವನಕ್ಕೆ ಕುತ್ತು ಬರುವ ಸಂಭವವಿರುತ್ತೆ. ಇಂಟರ್​​ನೆಟ್ ಬಳಕೆಯ ಸಂದರ್ಭದಲ್ಲೇ ಈ ನಾಪತ್ತೆ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ, ಯುವತಿಯರು ‌ಸಾಮಾಜಿಕ‌ ಜಾಲತಾಣಗಳ ಬಳಕೆಗೆ ಮುನ್ನ ಮುಂದಾಲೋಚನೆ ಮಾಡಬೇಕೆಂದು ಎಚ್ಚರಿಸಿದ್ರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಹೆಚ್.ಸಿ.ರಾಘವೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಕಾರ್ಡ್ ಸಂಸ್ಥೆ ಅಧ್ಯಕ್ಷ ಬಿ.ಡಿ.ಗೌಡ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ, ಬೆಳಗಾವಿ ಸ್ಪಂದನಾ ಸಂಸ್ಥೆಯ ನಿರ್ದೇಶಕ ವಿ.ಸುಶೀಲಾ ಹಾಜರಿದ್ರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا