Urdu   /   English   /   Nawayathi

ಆರ್​ಟಿಐ ಕಾರ್ಯಕರ್ತನಿಗೆ ತಪ್ಪು ಮಾಹಿತಿ: ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ದಂಡ

share with us

ಚಾಮರಾಜನಗರ: 23 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಪ್ಪು ಮಾಹಿತಿ ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಗರಸಭೆ ಆಯುಕ್ತರಿಗೆ ದಂಡ ವಿಧಿಸಲಾಗಿದೆ. ತಪ್ಪು ಮಾಹಿತಿ ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿ ಎಂಬುವವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ. ಕೊಳ್ಳೇಗಾಲದಲ್ಲಿನ ಕಲ್ಯಾಣಮಂಟಪಗಳ ಸಂಖ್ಯೆ, ಮಾಂಸದಂಗಡಿಗಳ ಸಂಖ್ಯೆ ಕುರಿತು ಆರ್​​ಟಿಐ ಕಾರ್ಯಕರ್ತ ದಶರಥ ಎಂಬವರು ಕೇಳಿದ್ದ ಪ್ರಶ್ನೆಗೆ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಲ್ಲದೇ, ಮಾಹಿತಿ ನೀಡಲು ವಿಳಂಬ ಮಾಡಿದ್ದರು. ಈ ಸಂಬಂಧ ಸಾವ೯ಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಮಂಜುನಾಥ್ ಎರಡು ಪ್ರಕರಣಗಳ ವಾದ ಪ್ರತಿವಾದ ಆಲಿಸಿ ಎರಡೂ ಪ್ರಕರಣಗಳಿಗೆ ತಲಾ 5 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.10 ಸಾವಿರ ರೂ. ದಂಡವನ್ನು ಆಯುಕ್ತರ ಮಾಸಿಕ ಸಂಬಳದಲ್ಲಿ 2 ಕಂತುಗಳಲ್ಲಿ ಪಡೆಯಲು ಆದೇಶಿಸಲಾಗಿದೆ.

ವರದಿ: ಗೂಳಿಪುರ ನಂದೀಶ್

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا