Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ನವದೆಹಲಿ: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳನ್ನು ಪರಿಶೀಲನೆ ನಡೆಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಎನ್'ಸಿಪಿ ಜೊತೆಗೆ ಸುದೀರ್ಘ ಚರ್ಚೆಗಳ ಬಳಿಕ ಶಿವಸೇನೆ ಜೊತೆಗೆ ಕೈಜೋಡಿಸಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಎನ್'ಸಿಪಿ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ತಮ್ಮ ನಿವಾಸದಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸಿದ್ದಾರೆಂದು ಹೇಳಿದ್ದಾರೆ. ಸುದೀರ್ಘ ಚರ್ಚೆಗಳ ಬಳಿಕ ಇದೀಗ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಂಡಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವುದ ಕುರಿತು ನಾಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಚರ್ಚೆ ವೇಳೆ ಕಾಂಗ್ರೆಸ್ ಶಿವಸೇನೆ ಹಾಗೂ ಎನ್'ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಒಪ್ಪಿಗೆ ಸೂಚಿಸಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ಇಂದೂ ಕೂಡ ಎನ್'ಸಿಬಿ ಹಾಗೂ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಶಿವಸೇನೆ ಜೊತೆಗೆ ಶುಕ್ರವಾರ ಮುಂಬೈನಲ್ಲಿ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ. ಮೂರು ಪಕ್ಷಗಳ ಸಭೆ ಬಳಿಕ ಶುಕ್ರವಾರ ಮುಂಬೈನಲ್ಲಿಯೇ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ಹೇಳಿಕೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಮಹಾರಾಷ್ಟ್ರ ನೂತನ ಸರ್ಕಾರ ರಚನೆ ಕುರಿತು 2 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವೆ ಈ ವಾರ ಯಾವುದೇ ರೀತಿಯ ಭೇಟಿಗಳಿಲ್ಲ. ಅಧಿಕಾರ ಹಂಚಿಕೆ ಕುರಿತು ಮುಂಬೈನಲ್ಲಿ ಮೂರೂ ಪಕ್ಷಗಳು ನಿರ್ಧಾರ ಕೈಗೊಳ್ಳಲಿವೆ ಎಂದು ಹೇಳಿದ್ದಾರೆ. ಡಿಸೆಂಬರ್ 1ರೊಳಗಾಗಿ ಸರ್ಕಾರ ರಚನೆ ಪ್ರಕ್ರಿಯೆ ನಡೆಯಲಿದೆ. ನಿನ್ನೆವರೆಗೂ ಮೂರು ಪಕ್ಷಗಳಿಂದ ಸುದೀರ್ಘ ಸಭೆಗಳು ನಡೆದಿವೆ. ಮುಂದಿನ ಎರಡು ದಿನಗಳಲ್ಲಿ ಸರ್ಕಾರ ರಚನೆ ಕುರಿತು ನಿರ್ಧಾರ ಪ್ರಕಟಿಸುತ್ತೇವೆಂದಿದ್ದಾರೆ.
ಕ, ಪ್ರ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |