Urdu   /   English   /   Nawayathi

ಸುಂಕ ವಸೂಲಿ ಸಿದ್ಧತೆಗೆ ಆಕ್ಷೇಪ

share with us

ಭಟ್ಕಳ: 30 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಿಯೂ ರಸ್ತೆ ಪೂರ್ಣವಾಗಿಲ್ಲ. ಆದರೆ, ಕಾಮಗಾರಿಯ ಗುತ್ತಿಗೆ ಪಡೆದ ಐಆರ್​ಬಿ ಸಂಸ್ಥೆಯವರು ಸದ್ದಿಲ್ಲದೆ ಶಿರೂರಿನಲ್ಲಿ ಟೋಲ್ ಆರಂಭಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕುಂದಾಪುರದಿಂದ -ಗೋವಾ ಚತುಷ್ಪಥ ರಸ್ತೆಯ ಮೊದಲ ಟೋಲ್​ಗೇಟ್ ತೆರೆಯಲು ಶಿರೂರಿನಲ್ಲಿ ಪ್ರಾಯೋಗಿಕ ಸಿದ್ಧತೆ ನಡೆಸಲಾಗುತ್ತಿದೆ. ಶಿರೂರಿನಲ್ಲಿ ಆರಂಭವಾಗುವ ಟೋಲ್​ಗೇಟ್​ನಿಂದ ಸುತ್ತಮುತ್ತಲಿನ ಹತ್ತಾರು ಕಿ.ಮೀ ಜನರು ಮನೆಯಿಂದ ತೋಟಕ್ಕೆ ಹೋಗಬೇಕಾದರೂ ಸುಂಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಗೆ ಶಿರೂರು ಪ್ರಮುಖ ವಾಣಿಜ್ಯ ಪ್ರದೇಶವಾಗಿದೆ. ಬ್ಯಾಂಕ್, ಶಾಲೆ, ಸಂಘ ಸಂಸ್ಥೆಗೆ ಗೋರ್ಟೆ, ಅಡಿಬೇರು, ಬೆಳಕೆ, ಸರ್ಪನಕಟ್ಟೆಯಿಂದ ಶಿರೂರಿಗೆ ಬರಬೇಕು. ಇನ್ನೂ ಶಿರೂರಿನಿಂದ ಪ್ರತಿ ಕೆಲಸಕ್ಕೂ ಕೂಡ 7 ಕಿ.ಮೀ ದೂರ ಇರುವ ಭಟ್ಕಳಕ್ಕೆ ಬರಬೇಕಾಗುತ್ತದೆ. ಹಾಗಾಗಿ ಸ್ಥಳೀಯ 10 ಕಿ.ಮೀ ವ್ಯಾಪ್ತಿಯವರೆಗೆ ಕಡ್ಡಾಯವಾಗಿ ರಿಯಾಯಿತಿ ನೀಡಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಟೋಲ್ ಆರಂಭಿಸುವ ಸಿದ್ಧತೆ ನಡೆಸುತ್ತಿರುವ ಮಾಹಿತಿ ಇರುವ ಕಾರಣ ಸ್ಥಳೀಯ ಹೆದ್ದಾರಿ ಹೋರಾಟ ಸಮಿತಿಯವರು ಸಂಸದರ ಜನಸಂಪರ್ಕ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದ್ದರು. ಮಾತ್ರವಲ್ಲದೆ ಸ್ಥಳೀಯ 10 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ನೀಡಬೇಕೆಂದು ಹೆದ್ದಾರಿ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು, ‘ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸದೆ ಟೋಲ್ ಆರಂಭಿಸಬಾರದು’ ಎಂದು ಕಂಪೆನಿ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಕಂಪನಿ ಅಧಿಕಾರಿಗಳು, ‘ಸರ್ವಿಸ್ ರಸ್ತೆ ವರದಿ ಕಳುಹಿಸಿದ್ದು ಆರ್​ಒ ಕಚೇರಿಯಿಂದ ಮಂಜೂರಾತಿ ದೊರೆಯಬೇಕಿದೆ’ ಎನ್ನುವ ಸಬೂಬು ಹೇಳುತ್ತಿದ್ದಾರೆ. ಈ ನಡುವೆ ಒಂದು ವಾರದಿಂದ ಪ್ರಾಯೋಗಿಕ ಸಂಚಾರ ಕೂಡ ನಡೆಯುತ್ತಿದೆ.

ಟೋಲ್ ಚಲೋ ಪ್ರತಿಭಟನೆ ಇಂದು: ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಟೋಲ್ ಪ್ರಾರಂಭಿಸುವ ಮುನ್ನ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಬುಧವಾರ ಬ್ರಹತ್ ಪ್ರತಿಭಟನೆ ನಡೆಯಲಿದೆ. ಒಂದೆಡೆ ಆರ್ಥಿಕ ಹಿನ್ನೆಡೆ ಇನ್ನೊಂದೆಡೆ ಕೃಷಿ ಕಾರ್ವಿುಕರು ಅಧಿಕವಿರುವ ಕಾರಣ ಭಟ್ಕಳ ಶಿರೂರು ಸುತ್ತಮುತ್ತ ಸ್ಥಳೀಯರಿಗೆ ಸುಂಕ ಪಾವತಿಸುವ ಕ್ರಮಕೈಗೊಂಡರೆ ಹೋರಾಟ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ. ಮಾತ್ರವಲ್ಲದೆ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ವಿುಸಿ ಟೋಲ್​ಗೇಟ್ ತೆರೆಯಲಿ ಎನ್ನುತ್ತಿದ್ದಾರೆ ವಾಹನ ಸವಾರರು.

ಈಗಾಗಲೇ ಪ್ರಕ್ರಿಯೇ ನಡೆಯುತ್ತಿದೆ. ಟೋಲ್ ವಿಭಾಗ ಪ್ರತ್ಯೇಕವಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಕಾರಣ ಒಂದೆರೆಡು ತಿಂಗಳಲ್ಲಿ ಸುಂಕ ವಸೂಲಾತಿ ಕಾರ್ಯ ಆರಂಭಿಸುವ ಸಾಧ್ಯತೆಗಳಿವೆ. ಸ್ಥಳೀಯರಿಗೆ ರಿಯಾಯಿತಿ ನೀಡುವುದು ಮೇಲಧಿಕಾರಿಗಳ ನಿರ್ಧಾರವಾಗಿದೆ.

| ಯೋಗೇಂದ್ರಪ್ಪ, ಹೆದ್ದಾರಿ ಕಾಮಗಾರಿಯ ಪ್ರೊಜೆಕ್ಟ್ ಮ್ಯಾನೇಜರ್

ಸಾರ್ವಜನಿಕರು ಶಾಂತಿಯುತವಾಗಿ ತಮ್ಮ ಬೇಡಿಕೆಗಳನ್ನು ನಮಗೆ ಸಲ್ಲಿಸಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್​ಬಿ ಸಂಸ್ಥೆಯ ಅಧಿಕಾರಿಗಳೊಂದಿಗೆ ರ್ಚಚಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.

| ಸಾಜಿದ್ ಅಹ್ಮದ್ ಮುಲ್ಲಾ, ಉಪವಿಭಾಗಾಧಿಕಾರಿಗಳು, ಭಟ್ಕಳ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا