Urdu   /   English   /   Nawayathi

ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುವಕನ ತಲೆ ಮೇಲೆ ಬಿತ್ತು ಕಸ್ಟಮ್ಸ್​ ಅಧಿಕಾರಿಗಳ ಕಣ್ಣು: ತಪಾಸಣೆಯಲ್ಲಿ ಬಯಲಾಯಿತು ಅಸಲಿಯತ್ತು!

share with us

ಕೊಚ್ಚಿ: 06 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ವಿಗ್​ನಲ್ಲಿ ಮರೆಮಾಚಿ 1 ಕೆ.ಜಿ.ಗಿಂತಲೂ ಅಧಿಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಕೇರಳ ಮೂಲದ ಯುವಕನೊಬ್ಬನನ್ನು ಸೀಮಾ ಸುಂಕ ಅಧಿಕಾರಿಗಳು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಕೇರಳದ ಮಲಪ್ಪುರಂನ ನಿವಾಸಿ ನೌಷಾದ್​ ಬಂಧಿತ. ಶಾರ್ಜಾದಿಂದ ಶುಕ್ರವಾರ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈತ ಸ್ವಲ್ಪ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಸೀಮಾ ಸುಂಕದ ವೈಮಾನಿಕ ಬೇಹುಗಾರಿಕಾ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದರು. ಆಗ ಆತ ತಾನು ಧರಿಸಿದ್ದ ವಿಗ್​ನಡಿ 1 ಕೆ.ಜಿ.ಗೂ ಅಧಿಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಯಿತು. ಸದ್ಯ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನೌಷಾದ್​ ವಿಗ್​ ಅಡಿಯಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬಂದಿದ್ದ. ತನ್ನ ತಲೆಯ ಮಧ್ಯಭಾಗದಲ್ಲಿ ವೃತ್ತಾಕಾರದಲ್ಲಿ ಶೇವ್​​ ಮಾಡಿ, ಚಿನ್ನವನ್ನು ಕಪ್ಪು ಕವರ್​ನಲ್ಲಿ ಸುತ್ತಿಟ್ಟು ಅದರ ಮೇಲೆ ಸ್ಪೈಕ್​ ವಿಗ್​ ಧರಿಸಿದ್ದ. ಯಾವುದೇ ಅನುಮಾನ ಬಾರದ ರೀತಿಯಲ್ಲಿ ಕವರ್​ ಮಾಡಿಕೊಂಡು ಬಂದಿದ್ದ. ಆದರೂ, ಆತನ ಅದೃಷ್ಟ ಕೈಕೊಟ್ಟಿತ್ತು. ಹೀಗಾಗಿ ಆತ ಕಸ್ಟಮ್ಸ್​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈ ವರ್ಷದ ಜುಲೈನಲ್ಲಿ ವ್ಯಕ್ತಿಯೊಬ್ಬ ಅಂದಾಜು 24 ಲಕ್ಷ ರೂ. ಮೌಲ್ಯದ ಕೊಕೇನ್ ಅನ್ನು ವಿಗ್​ನಡಿ ಕಳ್ಳಸಾಗಣೆ ಮಾಡುವಾಗ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್​ ಆಗಿತ್ತು. ಇದರಿಂದ ಪ್ರೇರಣೆಗೊಂಡು ನೌಷಾದ್​ ಕೂಡ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. (ಏಜೆನ್ಸೀಸ್​)​

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا