Urdu   /   English   /   Nawayathi

ಸ್ಕೂಲ್ ವಾಹನದಲ್ಲಿ ಏಕಾಏಕಿ ಬೆಂಕಿ.. ತಪ್ಪಿದ ಭಾರಿ ಅನಾಹುತ

share with us

ಧಾರವಾಡ: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಶಾಲಾ ಮಕ್ಕಳನ್ನು ಮನೆಗೆ ಬಿಡಲು ಹೊರಟಿದ್ದ ಖಾಸಗಿ ಓಮ್ನಿ ಕಾರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಓಲ್ಡ್ ಡಿಎಸ್​ಪಿ ಸರ್ಕಲ್ ಬಳಿ ಸಂಭವಿಸಿದೆ. ಖಾಸಗಿ ಶಾಲೆಯೊಂದರ ಮಕ್ಕಳನ್ನು ಎಂದಿನಂತೆ ಮನೆಗೆ ಕರೆದುಕೊಂಡು ಹೋಗುವಾಗ ದಿಢೀರ್​ನೇ ಕಾರಿನ ಮುಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಗೊಂಡ ಚಾಲಕ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಮಕ್ಕಳನ್ನು ಕೆಳಗೆ ಇಳಿಸಿದ್ದು, ಕೂಡಲೇ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا