Urdu   /   English   /   Nawayathi

Latest News:

Latest News:

ಸ್ಥಳೀಯರ ಮಾತಿಗೆ ಬೆಲೆ ಕೊಡದೇ ಪ್ರಾಣ ಕಳೆದುಕೊಂಡ ಪ್ರವಾಸಿಗ

share with us

ಮುರ್ಡೇಶ್ವರ: 22 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಒಬ್ಬ ಪ್ರವಾಸಿಗ ಮೃತಪಟ್ಟಿದ್ದು, ನಾಲ್ಕು ಜನರನ್ನು ರಕ್ಷಿಸಲಾಗಿದೆ. ಮೃತಪಟ್ಟ ವ್ಯಕ್ತಿ ಬೆಂಗಳೂರು ಮೂಲದ ಎನ್, ರಾಜು(27) ಎಂದು ಗುರುತಿಸಲಾಗಿದೆ. ಶನಿವಾರದಂದು ಬೆಂಗಳೂರಿನಿಂದ 11 ಜನರ ತಂಡವೊಂದು ಸಿಗಂದೂರು ಹಾಗೂ ಕೆಲವು ಕಡೆ ತೆರಳಿ ಮುರ್ಡೇಶ್ವರಕ್ಕೆ ಬಂದಿದ್ದು, ಭಾನುವಾರದಂದು ಬೆಳಿಗ್ಗೆ ಈಜಾಡಲು ಸಮುದ್ರಕ್ಕೆ ಇಳಿದಿದ್ದರು. ಸ್ಥಳೀಯ ಮೀನುಗಾರರು ನೀರಿನ ರಭಸ ಬಹಳ ಇದೆ ಹಾಗಾಗಿ ನೀರಿನಲ್ಲಿ ಇಳಿಯದಂತೆ ಎಚ್ಚರಿಸಿದರೂ ಕೂಡ ಮಾತು ಕೇಳದ ಐವರು ನೀರಿಗಿಳಿದು ಕೊಚ್ಚಿ ಹೋಗುತ್ತಿದ್ದರು. ತಕ್ಷಣ ಮೀನುಗಾರರು ಅವರನ್ನು ರಕ್ಷಿಸಿ ಕಡಲ ತೀರಕ್ಕೆ ತಂದರು. ಅವರಲ್ಲಿ ಒಬ್ಬ ಮಾತ್ರ ಹೆಚ್ಚು ನೀರು ಕುಡಿದಿದ್ದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾನೆ. ಪ್ರಕರಣ ಮುರ್ಡೇಶ್ವರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا