Urdu   /   English   /   Nawayathi

ಡಾಂಬರ್​ ಟ್ಯಾಂಕರ್​ನ ಒಳಗಡೆ ಚಾಲಕನ ಮೃತದೇಹ ಪತ್ತೆ..!

share with us

ಮಂಗಳೂರು: 21 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಟ್ಯಾಂಕರ್​ ವಾಹನದ ಟ್ಯಾಂಕ್ ಒಳಗಡೆ ಚಾಲಕನ ಶವ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿರಾಡಿ ಘಾಟಿಯ ಕೆಂಪು ಹೊಳೆ ಸಮೀಪ ನಡೆದಿದೆ. ತಮಿಳುನಾಡಿನ ತಿರುಚಿ ಜಿಲ್ಲೆಯ ಪೆತ್ತು ಪಟ್ಟಗ್ರಾಮದ ನಾಗರಾಜ್ ಮೃತಪಟ್ಟ ಚಾಲಕ ಎಂದು ತಿಳಿದು ಬಂದಿದೆ. ಮೃತ ನಾಗರಾಜ್ ಡಾಂಬರು ಕೊಂಡೊಯ್ಯುವ ಟ್ಯಾಂಕರ್‌ನಲ್ಲಿ ಚಾಲಕರಾಗಿದ್ದು, ಗುರುವಾರ ಹೊಸೂರಿನಿಂದ ಮಂಗಳೂರಿಗೆ ಡಾಂಬರ್​ ಸರಬರಾಜು ಮಾಡಲಿ ಎಂದು ಬಂದಿದ್ದರು. ಈ ವೇಳೆ ಟ್ಯಾಂಕರ್‌ ಒಳಗಡೆ ಇಳಿದ ಅವರು ಉಸಿರುಗಟ್ಟಿ ಅಥವಾ ರಾಸಾಯನಿಕ ಗಾಳಿ ಸೇವನೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೂಗಿನಲ್ಲಿ ನೊರೆ ಬಂದಿರುವುದು ಬಿಟ್ಟರೆ, ದೇಹದಲ್ಲಿ ಬೇರೆ ಯಾವುದೇ ಗಂಭೀರ ಗಾಯಗಳಿಲ್ಲ.

tanker

ಟ್ಯಾಂಕರ್​ನ ಟ್ಯಾಂಕ್​​ ಒಳಗಡೆ ಚಾಲಕನ ಮೃತದೇಹ ಪತ್ತೆ..!

ಇನ್ನು ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا