Urdu   /   English   /   Nawayathi

ಮಲೇಷ್ಯಾ ಪ್ರಧಾನಿ ಜತೆ ಮೋದಿ ಮಾತುಕತೆ; ಝಾಕಿರ್ ನಾಯ್ಕ್​ ಗಡಿಪಾರಿಗೆ ಒತ್ತಾಯ

share with us

ವ್ಲಾಡಿವೊಸ್ಟೋಕ್(ರಷ್ಯಾ): 05 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮೂರು ದಿನದ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮಲೇಷ್ಯಾ ಪ್ರಧಾನಿ ಮಹಾತಿರ್ ಬಿನ್ ಮೊಹಮ್ಮದ್​ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮೋದಿ- ಮಹಾತಿರ್ ಬಿನ್ ಮೊಹಮ್ಮದ್ ಮಾತುಕತೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ವಿವಾದಿತ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್‌​​​​ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮೋದಿ ಮಲೇಷ್ಯಾಗೆ ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಉಭಯ ದೇಶಗಳು ನಿರಂತರ ಸಂಪರ್ಕದಲ್ಲಿರಲಿವೆ ಎಂದು ವಿವರಣೆ ನೀಡಿದ್ದಾರೆ. ಕೋಮು ವಿರೋಧಿ ಹೇಳಿಕೆ ನೀಡುತ್ತಾ ವಿವಾದಿತ ಸೃಷ್ಟಿಸಿದ್ದ ಝಾಕಿರ್, ಮೂರು ವರ್ಷದ ಹಿಂದೆ ಭಾರತದಿಂದ ಪರಾರಿಯಾಗಿ ಮಲೇಷ್ಯಾ ಸೇರಿದ್ದರು. ಮಲೇಷ್ಯಾದ ಹಿಂದೂಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಪರಿಣಾಮ ಆ ದೇಶದಲ್ಲೂ ಅವರ ಸಾರ್ವಜನಿಕ ಭಾಷಣವನ್ನು ಬ್ಯಾನ್ ಮಾಡಲಾಗಿದೆ.

ಜಪಾನ್ ಪ್ರಧಾನಿ ಜೊತೆ ಮಾತುಕತೆ:

ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆಗೆ ಮೋದಿ ಆರ್ಥಿಕ ಬಲವರ್ಧನೆ ಹಾಗೂ ರಕ್ಷಣಾ ವಲಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಮೋದಿ-ಅಬೆ ಮೂರನೇ ಬಾರಿಗೆ ಮಾತುಕತೆ ನಡೆಸಿದ್ದಾರೆ. ಈ ಮೊದಲು ಒಸಾಕದಲ್ಲಿ ಜಿ-20 ಶೃಂಗಸಭೆ ಮತ್ತು ಫ್ರಾನ್ಸ್​ನಲ್ಲಿನ ಜಿ-7 ಶೃಂಗಸಭೆಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا