Urdu   /   English   /   Nawayathi

ಮುಂಬೈ ಸಂಪರ್ಕಿಸುವ ಎಲ್ಲ ರೈಲು ರದ್ದು

share with us

ಮಂಗಳೂರು: 05 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಹಾಮಳೆಯಿಂದ ತತ್ತರಿಸಿರುವ ಮುಂಬೈ ವಿಭಾಗ ಸಂಪರ್ಕಿಸುವ ಎಲ್ಲ ರೈಲುಗಳನ್ನು ಮುಂದಿನ 24 ಗಂಟೆ ಅವಧಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಮಂಗಳೂರಿನಿಂದ ಹೊರಟ ಮತ್ಸೃಗಂಧ ಎಕ್ಸ್‌ಪ್ರೆಸ್ ಕುಂದಾಪುರದಿಂದ ವಾಪಸಾಗಿದೆ. ಮಧ್ಯಾಹ್ನ 12.50ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಬೇಕಾಗಿದ್ದ ಮತ್ಸೃಗಂಧ ಎಕ್ಸ್‌ಪ್ರೆಸ್(ನಂ.12620) ಒಂದು ಗಂಟೆ ವಿಳಂಬವಾಗಿ 1.50ಕ್ಕೆ ಪ್ರಯಾಣ ಆರಂಭಿಸಿತ್ತು. ರೈಲು ಕುಂದಾಪುರ ನಿಲ್ದಾಣ ತಲುಪುವ ವೇಳೆಗೆ ಮುಂಬೈ ವಿಭಾಗ ಸಂಪರ್ಕಿಸುವ ಎಲ್ಲ ರೈಲುಗಳನ್ನು ರದ್ದುಪಡಿಸಿರುವ ಸಂದೇಶ ಇಲಾಖೆ ಅಧಿಕಾರಿಗಳಿಗೆ ದೊರೆತಿದೆ. ಕೂಡಲೇ ಮತ್ಸೃಗಂಧ ಎಕ್ಸ್‌ಪ್ರೆಸ್ ರೈಲಿನ ಕುಂದಾಪುರ ಮತ್ತು ಮುಂಬೈ ನಡುವಿನ ಪ್ರಯಾಣವನ್ನು ರದ್ದುಗೊಳಿಸಲಾಯಿತು. ಇದೇ ಸಂದರ್ಭ ಮುಂಬೈಯಿಂದ ಮಂಗಳೂರು ಸೆಂಟ್ರಲ್‌ಗೆ ಹೊರಡಬೇಕಾಗಿದ್ದ ಮತ್ಸೃಗಂಧ ಎಕ್ಸ್‌ಪ್ರೆಸ್(ನಂ.12619) ಕೂಡ ರದ್ದುಗೊಳಿಸಲಾಗಿದೆ. ತಿರುವನಂತಪುರದಿಂದ ಬೆಳಗ್ಗೆ ಪ್ರಯಾಣ ಆರಂಭಿಸಿದ ನೇತ್ರಾವತಿ ಎಕ್ಸ್‌ಪ್ರೆಸ್(ನಂ.16346) ಕೇರಳದ ಶೋರ್ನೂರು ತನಕ ಸಂಚರಿಸಿದೆ. ಅಲ್ಲಿಂದ ಕುರ್ಲಾವರೆಗಿನ ಪ್ರಯಾಣ ರದ್ದುಪಡಿಸಲಾಯಿತು. ಕೊಚುವೆಲಿ- ಕುರ್ಲಾ ಗರೀಬ್ ರಥ್ ಎಕ್ಸ್‌ಪ್ರೆಸ್(ನಂ. 12202) ಭಾನುವಾರ ಕಣ್ಣೂರು ತನಕ ಪ್ರಯಾಣಿಸಿದ್ದು, ಅಲ್ಲಿಂದ ಕುರ್ಲಾ ತನಕದ ಪ್ರಯಾಣವನ್ನು ರದ್ದುಪಡಿಸಲಾಯಿತು. ಕುರ್ಲಾ- ತಿರುವನಂತಪುರ ನೇತ್ರಾವತಿ ಎಕ್ಸ್‌ಪ್ರೆಸ್ (ನಂ.16345), ಮಂಗಳೂರು ಜಂಕ್ಷನ್- ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಸಿಎಸ್‌ಎಂಟಿ) ಎಕ್ಸ್‌ಪ್ರೆಸ್ (ನಂ.12134), ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್(ನಂ.12133), ಮಂಗಳೂರು ಸೆಂಟ್ರಲ್- ಸಿಎಸ್‌ಎಂಟಿ ಕೊಂಕಣ್ ಕನ್ಯಾ ಎಕ್ಸ್‌ಪ್ರೆಸ್ (ನಂ.10112), ಸಿಎಸ್‌ಎಂಟಿ- ಮಂಗಳೂರು ಸೆಂಟ್ರಲ್ ಕೊಂಕಣ್ ಕನ್ಯಾ ಎಕ್ಸ್‌ಪ್ರೆಸ್ (ನಂ.10111), ಸಿಎಸ್‌ಎಂಟಿ- ಮಂಗಳೂರು ಸೆಂಟ್ರಲ್ ಮಾಂಡೋವಿ ಎಕ್ಸ್‌ಪ್ರೆಸ್ (ನಂ.10103), ಎರ್ನಾಕುಳಂ- ಕುರ್ಲಾ ಎಸಿ ತುರಂತೊ ಎಕ್ಸ್‌ಪ್ರೆಸ್ (ನಂ.12224) ಭಾನುವಾರದ ಪ್ರಯಾಣ ರದ್ದುಗೊಳಿಸಲಾಗಿದೆ.
(ಬಾಕ್ಸ್)

ಇಂದು ಕೊಚುವೆಲಿ- ಕುರ್ಲಾ ಇಲ್ಲ
ಕೊಚುವೆಲಿ (ತಿರುವನಂತಪುರ)- ಕುರ್ಲಾ (ಮುಂಬೈ) ನಂ. 22114 ಎಕ್ಸ್‌ಪ್ರೆಸ್ ಆ.5 ರಂದು ಪ್ರಯಾಣಿಸುವುದಿಲ್ಲ.

ಭೂಕುಸಿತ ಕಾರಣ
ಮುಂಬೈನಲ್ಲಿ ಮಳೆ ನೀರಿನ ಪ್ರವಾಹದಿಂದ ಅನೇಕ ಕಡೆ ಭೂಕುಸಿತ, ಭಾರೀ ಬಂಡೆ ಕಲ್ಲುಗಳ ಪಲ್ಲಟ ಸಂಭವಿಸಿದ್ದು, ಮಹಾರಾಷ್ಟ್ರ ಭಾಗಶಃ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದೆ. ಭೂಕುಸಿತ, ಪ್ರವಾಹ ಮತ್ತು ಉರುಳಿದ ಬಂಡೆ ಕಲ್ಲುಗಳು ಅಲ್ಲಲ್ಲಿ ರೈಲು ಮಾರ್ಗ ಆಕ್ರಮಿಸಿಕೊಂಡ ಕಾರಣ ಮುಂಬೈ ಸಂಪರ್ಕಿಸುವ ಎಲ್ಲ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا