Urdu   /   English   /   Nawayathi

ಹಿಂದುಯೇತರ ವ್ಯಕ್ತಿಯ ಆಹಾರ ಡೆಲಿವರಿ ನನಗೆ ಬೇಡ: ಗ್ರಾಹಕನಿಗೆ ಜೋಮ್ಯಾಟೋ ಖಡಕ್ ತಿರುಗೇಟು!

share with us

ನವದೆಹಲಿ: 31 ಜುಲೈ 2019 (ಫಿಕ್ರೋಖಬರ್ ಸುದ್ದಿ) ಪಾರ್ಸೆಲ್ ಮಾಡಿರುವ ಆಹಾರವನ್ನು ತಂದು ಕೊಡುವುದು ಡೆಲಿವರಿ ಬಾಯ್ ಕೆಲಸವಷ್ಟೇ. ಆದರೆ ಇಲ್ಲೊಬ್ಬ ಗ್ರಾಹಕ ಹಿಂದುಯೇತರ ವ್ಯಕ್ತಿ ಡೆಲಿವರಿ ಮಾಡಲು ಬಂದಿದ್ದ ಅಂತ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿರುವ ಎಂತ ಹೀನಾ ಕೆಲಸ. ಆರ್ಡರ್ ಮಾಡಿ ನಂತರ ಕ್ಯಾನ್ಸಲ್ ಮಾಡಿರುವ ಅಮಿತ್ ಶುಕ್ಲಾ ಎಂಬಾತ ತನ್ನ ಟ್ವೀಟರ್ ನಲ್ಲಿ ನಾನು ಜೋಮ್ಯಾಟೋ ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗಿತ್ತು. ನಾನು ಡೆಲಿವರಿ ಬಾಯ್ ನನ್ನ ಬದಲಿಸುವ ಎಂತ ಕೇಳಿದ್ದಕ್ಕೆ ಸಂಸ್ಥೆಯವರು ಆಗಲ್ಲ ಎಂದಿದ್ದಾರೆ ಎಂದು ಬರೆದುಕೊಂಡಿದ್ದರು.

पं अमित शुक्ल@NaMo_SARKAAR

Just cancelled an order on @ZomatoIN they allocated a non hindu rider for my food they said they can't change rider and can't refund on cancellation I said you can't force me to take a delivery I don't want don't refund just cancel

5,193

20:26 - 30 Jul 2019

Twitter Ads information and privacy

10.3K people are talking about this

ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಂಸ್ಥೆಯವರು ಹಣ ರಿಫಂಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ನಿಮ್ಮ ರಿಫಂಡ್ ಸಹ ಬೇಕಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವೀಟರ್ ನಲ್ಲಿ ಜೋಮ್ಯಾಟೋಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಜೋಮ್ಯಾಟೋ ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಗ್ರಾಹಕನಿಗೆ ಖಡಕ್ ತಿರುಗೇಟು ನೀಡಿದೆ. ಇನ್ನು ಇದಕ್ಕೆ ಜೋಮ್ಯಾಟೋ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ನರ್‌ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯ ದುಃಖ ಆಗಲಾರದು ಎಂದು ಬರೆದು ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿದ್ದಾರೆ.

Deepinder Goyal@deepigoyal

We are proud of the idea of India - and the diversity of our esteemed customers and partners. We aren’t sorry to lose any business that comes in the way of our values.  https://twitter.com/ZomatoIN/status/1156429449258250240 …

Zomato India@ZomatoIN

Food doesn’t have a religion. It is a religion. https://twitter.com/NaMo_SARKAAR/status/1156217070247268352 …

30.8K

10:38 - 31 Jul 2019

Twitter Ads information and privacy

12.3K people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا