Urdu   /   English   /   Nawayathi

ಚಂದ್ರನ ಮೇಲೆ 5 ಎಕರೆ ಭೂಮಿ ಖರೀದಿಸಲು ಜಸ್ಟ್‌ ₹9500 ಖರ್ಚು ಮಾಡಿದ ಭಾರತೀಯ!

share with us

ನವದೆಹಲಿ: 30 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮನುಷ್ಯನಿಗೆ ಒಂದು ವಿಸನ್ ಇರಲೇಬೇಕು. ಇಂತಹ ದೂರಾಲೋಚನೆ ಹೊಂದಿದ ಭಾರತೀಯನೊಬ್ಬ ಚಂದಮಾಮನ ಮೇಲೆ 5 ಎಕರೆಯಷ್ಟು ಜಾಗ ಖರೀದಿಸಿದ್ದಾನೆ. ದೂರದೃಷ್ಟಿಯಿರಿಸಿಕೊಂಡು ಜಾಗ ಖರೀದಿಸಿದ ಆತ ಕೊಟ್ಟ ಹಣ ತುಂಬಾ ಕಡಿಮೆ. ಈತ 16 ವರ್ಷದ ಹಿಂದೆಯೇ ಚಂದಿರನ ಮೇಲೆ ಪ್ಲಾಟ್ ಪರ್ಚೇಸ್ ಮಾಡಿದ್ದಾನೆ. ಭೂಮಿ ಮೇಲೆ ಒಂದು ಸೈಟ್ ತೆಗೆದುಕೊಳ್ಳೋದೆ ಈಗ ಕಷ್ಟ. ಆದರೆ, ವರ್ಷಗಳ ಹಿಂದೆ ಚಂದ್ರನ ಮೇಲೆ ಜಾಗ ಖರೀದಿಸೋದು ಸಣ್ಣ ಮಾತಲ್ಲ. ಆದರೂ ಹೈದರಾಬಾದ್‌ ನಿವಾಸಿ ರಾಜೀವ್‌ ವಿ ಬಾಗ್ದಿ ಎಂಬ ಆಯುರ್ವೇದಿಕ್ ಮಳಿಗೆ ಮಾಲೀಕ 2003ರಲ್ಲಿಯೇ 9500ಗೆ ಪ್ಲಾಟ್‌ ಖರೀದಿಸಿದ್ದಾರೆ. ಮೂಲತಃ ರಾಜಸ್ಥಾನದ ಬಿಕಾನೇರ್‌ನ ರಾಜೀವ್‌ ಪ್ರಸ್ತುತ ಹೈದರಾಬಾದ್​ನಲ್ಲಿ ವಾಸವಿದ್ದು, ನ್ಯೂಯಾರ್ಕ್‌ ಮೂಲದ ಲೂನಾರ್‌ ಸೊಸೈಟಿ ಇಂಟರ್‌ನ್ಯಾಷನಲ್‌ ಮೂಲಕ ಈ ಪ್ಲಾಟ್‌ ಖರೀದಿ ಮಾಡಿದ್ದಾರೆ.

16 Years Ago, This Indian Bought A Plot On The Moon For Just Rs 9500

ಮಾನವ ಕುಲಕ್ಕೆ ಒಳ್ಳೇ ಸಂಗತಿ ಹೊತ್ತು ತರುತ್ತೆ ಚಂದ್ರಯಾನ-2!
ಚಂದ್ರಯಾನ-2 ಯಶಸ್ವಿಯಾಗಿದೆ. ಭಾರತೀಯನಾಗಿ ಅದು ನನಗೆ ಹೆಮ್ಮೆ. ಮನುಷ್ಯ ಕುಲಕ್ಕೆ ಒಳಿತಾಗುವ ಸಾಕಷ್ಟು ಸಂಗತಿ ಚಂದ್ರಯಾನ-2 ಹೊತ್ತು ತರಲಿದೆ. ಚಂದ್ರ ಮತ್ತು ಮಂಗಳನ ಅಂಗಳಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಈಗಾಗ್ಲೇ ಮಾತುಗಳು ಕೇಳಿ ಬರ್ತಿವೆ. ಅದನ್ನ ನಿಜವಾಗಿಸಲು ನಿಜ ಪ್ರಯತ್ನಗಳೂ ನಡೆಯುತ್ತಿವೆ. 2030ರ ವೇಳೆಗೆ ಚಂದ್ರನ ಬಳಿ ಪ್ರವಾಸಕ್ಕೆ ತೆರಳುವಂತಾದ್ರೂ ಅಚ್ಚರಿ ಪಡ್ಬೇಕಿಲ್ಲ ಎಂದು ರಾಜೀವ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಬಾಲ್ಯದಲ್ಲೇ ಚಂದ್ರನ ಬಗೆಗೆ ಕುತೂಹಲ ಬೆಳೆಸಿಕೊಂಡಿದ್ದ!

ಚಂದ್ರನ ಬಗೆಗೆ ಆ ಜಿಜ್ಞಾಸೆ ಯಾಕಿತ್ತು ಅಂತಾ ರಾಜೀವ್​​ಗೆ ತಿಳಿದಿಲ್ವಂತೆ. ಇಂಟರ್ನೆಂಟ್‌ ಸರ್ಚ್ ಮಾಡ್ತಿದ್ದಾಗ ಚಂದ್ರನ ಮೇಲೆ ನಿವೇಶನ ಖರೀದಿಯ ಬಗ್ಗೆ ಸ್ಟೋರಿ ನೋಡಿದ್ದರಂತೆ. ಬಳಿಕ ಆ ಬಗ್ಗೆ ಅಧ್ಯಯನ ಮಾಡಿದ್ದಾರೆ. ಸಂಶೋಧನೆಗಿಳಿದಿದ್ದಾರೆ. ಎಲ್ಲ ಖಚಿತಪಡಿಸಿಕೊಂಡು ಸೈಟ್ ಖರೀದಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಚಂದ್ರಗಣ ರಾಜ್ಯ(Lunar Republic)ದಿಂದ ಅಧಿಕೃತ ದಾಖಲೆಗಳನ್ನೂ ಪಡೆದಿದ್ದಾರೆ ರಾಜೀವ್. 2003 ಜುಲೈ 27ರಂದು ನ್ಯೂಯಾರ್ಕ್‌ನ ಚಂದ್ರ ನೋಂದಾವಣಿ ಕಚೇರಿಯಿಂದ ನಿವೇಶನ ಖರೀದಿ ಪತ್ರ ಪಡ್ಕೊಂಡಿದ್ದಾರೆ. ಮೇರ್ ಇಬ್ರೀಯಂ ಅಂದ್ರೇ (ಮಳೆ ಸಮುದ್ರ) ಪ್ರದೇಶದ 32.8 ಡಿಗ್ರಿ ಉತ್ತರ ಅಕ್ಷಾಂಶ,15.6 ಡಿಗ್ರಿ ಪಶ್ಚಿಮ ರೇಖಾಂಶದ ಟ್ರ್ಯಾಕ್‌-30ನಲ್ಲಿ 5 ಎಕರೆ ಜಾಗಕ್ಕೆ ನಿಜ ಮಾಲೀಕ ನಾನೇ ಅಂತಾರೆ ರಾಜೀವ್.

ಮಾನವರೆಲ್ಲ ಮುಂದೊಂದು ದಿನ ಚಂದಿರನತ್ತ ಮುಖ ಮಾಡ್ತಾರೆ!

ನಾನು ಭೂಮಿ ಮೇಲಿದ್ರೂ ಚಂದ್ರನ ಮೇಲೆ ಜಾಗದ ಹಕ್ಕು ಪಡೆದಿರುವೆ. ಸಂಶೋಧನೆಗಳು ಯಶಸ್ವಿಯಾಗಿ ಅಲ್ಲಿ ವಾಸ ಯೋಗ್ಯ ಅಂತಾ ತಿಳಿದ್ರೇ, ಮನುಷ್ಯರು ಚಂದಿರನತ್ತ ಮುಖ ಮಾಡ್ತಾರೆ. ಇದರಲ್ಲಿ ಕ್ಲಿಕ್ ಆಗ್ತೀನೋ ಇಲ್ಲ ಫೇಲಾಗ್ತೀನೋ.. ಒಂದಲ್ಲಾ ಒಂದು ದಿನ ಮನುಷ್ಯ ಕುಲಕ್ಕೆ ಸಹಾಯಕವಾಗುತ್ತೆ. ಮುಂಬರುವ ಪೀಳಿಗೆಯಾದ್ರೂ ಪೂರ್ವಜರು ಎಷ್ಟೊಂದು ದೂರದೃಷ್ಟಿ ಹೊಂದಿದ್ದರೆಂದುಕೊಳ್ತಾರೆ. ಎನ್ನುತ್ತಾರೆ ರಾಜೀವ್​.

ಮುಂದಿನ 20 ವರ್ಷದಲ್ಲಿ ಮನೆಗೊಬ್ಬರು ಚಂದ್ರನ ಮೇಲಿನ ನಿವಾಸಿಗಳು!
ನಾನಷ್ಟೇ ಅಲ್ಲ, ಈಗಾಗಲೇ ಚಂದಮಾಮನ ಮೇಲೆ ಸಾಕಷ್ಟು ಜನ ಜಾಗ ಖರೀದಿಸಿದ್ದಾರೆ. ಪ್ರತಿ ಭಾರತೀಯ ಕುಟುಂಬದಲ್ಲೂ ಒಬ್ಬರಾದರೂ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಹಾಗೇ ಮುಂದಿನ 20 ವರ್ಷದಲ್ಲಿ ಪ್ರತಿ ಕುಟುಂಬದ ಯಾರಾದರೂ ಒಬ್ಬರು ಚಂದ್ರನ ಮೇಲೆ ನೆಲೆಸುತ್ತಾರೆ. ಹೀಗಂದು ಕೊಂಡೇ ನಾನು ಅಲ್ಲಿ 5 ಎಕರೆ ಜಾಗ ಖರೀದಿಸಿರುವೆ. ಹಾಗಾಗಿ ಭೂಮಿ ಮೇಲಿನ ಸೈಟ್‌ಗೆ ಹೋಲಿಸಿದ್ರೆ ನಾನು ಖರೀದಿಸಿದ ಪ್ಲಾಟ್‌ ಬೆಲೆ ತುಂಬಾ ಕಡಿಮೆ ಅಂತಾರೆ ರಾಜೀವ್. ಈ ಕನಸುಗಾರನ ಕನಸು ನಿಜವಾಗುವ ಕಾಲ ದೂರವಿಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا