Urdu   /   English   /   Nawayathi

ಮುಂಬೈ ಸೇರಿದ್ದ ಶಾಸಕರ ಪೈಕಿ ಐವರು ಬೆಂಗಳೂರಿಗೆ

share with us

ಬೆಂಗಳೂರು: 29 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಮುಂಬೈ ಸೇರಿದ್ದ ಶಾಸಕರ ಪೈಕಿ ಕಾಂಗ್ರೆಸ್‌ನ ಐವರು ಅನರ್ಹ ಶಾಸಕರು ಸೋಮವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ, ಕೆ.ಆರ್‌.ಪುರದ ಬೈರತಿ ಬಸವರಾಜು, ಹೊಸಕೋಟೆಯ ಎಂಟಿಬಿ ನಾಗರಾಜ್‌, ಯಶವಂತಪುರದ ಎಸ್‌.ಟಿ ಸೋಮಶೇಖರ್‌, ಯಲ್ಲಾಪುರದ ಶಿವರಾಮ್‌ ಹೆಬ್ಬಾರ್‌ ಅವರು ಮುಂಬೈನಿಂದ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಯಾರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಅನರ್ಹ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಒಟ್ಟು 17 ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಮುಂಬೈ ಹಾರಿದ್ದರು. ಪಕ್ಷದ ವಿಪ್‌ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ 17 ಶಾಸಕರನ್ನೂ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಅನರ್ಹಗೊಳಿಸಿದ್ದಾರೆ.

ANI✔@ANI

: Five disqualified Congress MLAs including Byrathi Basavaraj, MTB Nagaraj, ST Somashekhar return to Bengaluru from Mumbai.

View image on TwitterView image on TwitterView image on TwitterView image on Twitter

103

9:06 AM - Jul 29, 2019

Twitter Ads info and privacy

24 people are talking about this

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا