Urdu   /   English   /   Nawayathi

ಹಣ ದೋಚಿ ಪರಾರಿಯಾಗಿದ್ದ ಕಳ್ಳರ ಬಂಧನ

share with us

ಬೆಳಗಾವಿ: 16 ಜುಲೈ 2019 (ಫಿಕ್ರೋಖಬರ್ ಸುದ್ದಿ) ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿ ಹಣದ ಬ್ಯಾಗ್​ಅನ್ನು ದೋಚಿದ ಪ್ರಕರಣವನ್ನು ಸೋಮವಾರ ಬೇಧಿಸಿ ಮೂವರನ್ನು ಬಂಧಿಸುವಲ್ಲಿ ಯಮಕನಮರಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಮೇಶ ಚಂದ್ರಶೇಖರ್​ ಪಾಟೀಲ್​​, ಅಪ್ಪಾಸಾಹೇಬ ಶಿವಪ್ಪಾ ಪೆಗಡೆ (28) ಹಾಗೂ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಪರಶುರಾಮ ಯಲ್ಲಪ್ಪಾ ಗುಡ್ಡೆಪ್ಪಗೋಳ(25) ಬಂಧಿತರು. ಯಮಕನಮರಡಿ ಗ್ರಾಮದ ಮಗಹಾವೀರ ಪಾಟೀಲ್​ ಎಂಬುವರು ಮೇ.18 ರಂದು ಹತ್ತರಗಿಯಲ್ಲಿರುವ ತಮ್ಮ ಪೆಟ್ರೋಲ್ ಬಂಕ್​ನಲ್ಲಿ ಸಂಗ್ರಹವಾಗಿದ್ದ 258116 ರೂ. ಹಣವನ್ನು ಬ್ಯಾಗ್​​ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ ಹಣದ ಬ್ಯಾಗ್​ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಮಹಾವೀರ ಪಾಟೀಲ್​, ಯಮಕನಮರಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹಣ ದೋಚಿಕೊಂಡ ಪರಾರಿಯಾಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.60 ಲಕ್ಷ ರೂ. ನಗದು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Three thieves are arrested after bag theft

ಗೋಕಾಕ್​ ಡಿವೈಪಿ ಡಿ.ಟಿ.ಪ್ರಭು ಹಾಗೂ ಹುಕ್ಕೇರಿ ಸಿಪಿಐ ಎಸ್.ಕೆ.ಹೊಳೆನವರ ಇವರ ಮಾರ್ಗದರ್ಶನದಲ್ಲಿ ಯಮಕನಮರಡಿ ಪಿಎಸ್‌ಐ ಗಜಾನನ ನಾಯಕ್​, ಹುಕ್ಕೇರಿ ಪೊಲೀಸ್ ಠಾಣೆಯ ಪೊಲಿಸ್ ಸಿಬ್ಬಂದಿ ಸೇರಿದಂತೆ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا