Urdu   /   English   /   Nawayathi

ಬೆಂಗಳೂರು: ಮೋಜು-ಮಸ್ತಿ ಮಾಡಲು ಅಂಗಡಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

share with us

ಬೆಂಗಳೂರು: 09 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮೋಜಿಗಾಗಿ ರಾತ್ರಿ ವೇಳೆಯಲ್ಲಿ ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಆರ್ ಟಿ ನಗರದ ಸೈಯದ್ ಮೊಹಮ್ಮದ್ ಫೈಜಲ್ (20) ಹಾಗೂ ಬಿಹಾರ ಮೂಲದ ವಿಕ್ರಮ್ ಕುಮಾರ್ ಅಲಿಯಾಸ್ ಉಸ್ಮಾನ್ (20) ಬಂಧಿತ ಆರೋಪಿಗಳು. ಈ ಇಬ್ಬರು ಜೂನ್ 30ರ ರಾತ್ರಿ ಎನ್ ಆರ್ ಕಾಲೋನಿಯಲ್ಲಿರುವ ಜನನಿ ಪಾನ್ ಬಂಢಾರ್ ಅಂಗಡಿಯ ಬೀಗ ಮುರಿದು ಸುಮಾರು 18 ಸಾವಿರ ನಗದು ಹಾಗೂ 30 ಸಾವಿರ ರೂ ಬೆಲೆಬಾಳುವ ವಿವಿಧ ಕಂಪನಿಯ ಸಿಗರೇಟ್ ಪ್ಯಾಕ್ ಬಂಡಲ್ ಗಳನ್ನು ಕಳವು ಮಾಡಿದ್ದರು. ಇದೇ ರೀತಿ 4 ಕಡೆ ಕನ್ನ ಹಾಕಿ ಒಟ್ಟು 2.5 ಲಕ್ಷ ನಗದು ಸೇರಿ ಸಿಗರೇಟ್ ಪ್ಯಾಕ್ ಬಂಡಲ್ ಗಳು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕರು ಬಸವನಗುಡಿ ಠಾಣೆಯಲ್ಲಿ ದೂರು ನೀಡಿದ್ದರು. ಬಂಧಿತರಿಂದ ನಲವತ್ತು ಸಾವಿರ ನಗದು, ಎರಡು ಮೊಬೈಲ್, ಸಿಗರೇಟ್ ಪ್ಯಾಕ್ ಗಳು, ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಹೇಳಿದ್ದಾರೆ. ಬಂಧಿತ ವಿಕ್ರಂ ಕುಮಾರ್ ಬಿಹಾರ ಮೂಲದವನಾಗಿದ್ದು ಕೋರವಮಂಗಲ, ಕೆಪಿ ಅಗ್ರಹಾರದಲ್ಲಿ ಅಂಗಡಿ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದವನು, ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಕ, ಪ್ರ ವರದಿa

Prayer Timings

Fajr فجر
Dhuhr الظهر
Asr أسر
Maghrib مغرب
Isha عشا