Urdu   /   English   /   Nawayathi

ಧರೆಗುರುಳಿದ ಮರ, ವಿದ್ಯುತ್ ಕಂಬ

share with us

ಭಟ್ಕಳ: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಜಾಲಿ ಪಪಂ ವ್ಯಾಪ್ತಿಯ ದುರ್ಗಾಪರಮೇಶ್ವರಿ ಕಾಲನಿಯಲ್ಲಿ ಮರ ಉರುಳಿ ಬಿದ್ದು ಎರಡು ಮನೆ ಹಾಗೂ ಐದು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಮರದ ಕೊಂಬೆಗಳು ಬಿದ್ದು ವಿಷ್ಣು ನಾಯ್ಕ ಹಾಗೂ ದಾಕ್ಷಾಯಿಣಿ ಎಂಬುವವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಸುಗಮ ರಸ್ತೆ ಸಂಚಾರಕ್ಕೆ ಸಹಕರಿಸಿದರು. ಹೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪಪಂ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಜಾಲಿ ಗ್ರಾಮ ಲೆಕ್ಕಾಧಿಕಾರಿ ಮನೋಜ, ಉಪವಲಯ ಅರಣ್ಯಾಧಿಕಾರಿ ರವಿ, ಗ್ರಾಮ ಸಹಾಯಕ ವಾಸು ಶೆಟ್ಟಿ, ಮಾಸ್ತಯ್ಯ ನಾಯ್ಕ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا