Urdu   /   English   /   Nawayathi

ಎನ್ ಡಿಎ 2 ಸರ್ಕಾರದಲ್ಲಿ ಉಜ್ವಲ ಯೋಜನೆ ವಿಸ್ತರಣೆ, ಸಣ್ಣ ಎಲ್ ಪಿಜಿ ಭರ್ತಿಗೆ ಅವಕಾಶ

share with us

ನವದೆಹಲಿ: 30 ಮೇ 2019 (ಫಿಕ್ರೋಖಬರ್ ಸುದ್ದಿ) ಬಿಜೆಪಿ ಸರ್ಕಾರದ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಎನ್ ಡಿಎ 2 ಸರ್ಕಾರ ಅಧಿಕಾರಕ್ಕೆ ಬಂದ ನಂತರ 100 ದಿನಗಳಿಗೆ ಈ ಯೋಜನೆ ವಿಸ್ತಾರವಾಗಲಿದೆ. ಅಲ್ಲದೆ ಸಣ್ಣ ಎಲ್ ಪಿಜಿ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ನೀಡಲಾಗಿದ್ದು ಈ ಮೂಲಕ ಜನರು ನಿಗದಿತವಾಗಿ ಪುನರ್ ಭರ್ತಿ ಮಾಡಿಕೊಳ್ಳಬಹುದು. ಈ ಹಿಂದೆ ಪುನರ್ ಬುಕ್ಕಿಂಗ್ ವೆಚ್ಚ ಹೆಚ್ಚಾಗಿದ್ದರಿಂದ ಬಹುತೇಕ ಫಲಾನುಭವಿಗಳಿಗೆ ಸಿಲಿಂಡರ್ ನ್ನು ಬಳಕೆ ಮಾಡುವ ಸೌಲಭ್ಯವಿರಲಿಲ್ಲ. ಬಡವರ್ಗದ ಮಹಿಳೆಯರಿಗೆ ಪ್ರಯೋಜನವಾಗಲು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಉಜ್ವಲಾ ಯೋಜನೆ ಬಿಜೆಪಿಗೆ ರಾಜಕೀಯವಾಗಿ ಸಹಾಯವಾಗಿತ್ತು. ಈ ಯೋಜನೆಯನ್ನು ಎನ್ ಡಿಎ 2 ಸರ್ಕಾರ ವಿಸ್ತರಿಸಲಿದ್ದು ಸುಮಾರು 80 ಲಕ್ಷಕ್ಕೂ ಅಧಿಕ ಸಿಲಿಂಡರ್ ಗಳನ್ನು ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ವಿತರಣೆ ಮಾಡಲಾಗುತ್ತದೆ. ಇಲ್ಲಿಯವರೆಗೆ ಸುಮಾರು 7.20 ಕೋಟಿ ಎಲ್ ಪಿಜಿ ಸಿಲೆಂಡರ್ ಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ.

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا