Urdu   /   English   /   Nawayathi

ಕಮಲದ ಹೊಡೆತಕ್ಕೆ ಖರ್ಗೆ ಕೋಟೆ ಛಿದ್ರ ಛಿದ್ರ...ಸೋಲಿಲ್ಲದ ಸರದಾರನಿಗೆ ಶಾಕ್​ ಕೊಟ್ಟ ಡಾಕ್ಟರ್​ ಜಾಧವ್

share with us

ಕಲ್ಬುರ್ಗಿ: 23 ಮೇ 2019 (ಫಿಕ್ರೋಖಬರ್ ಸುದ್ದಿ) ಹೌದು, ಬಾರಿ ಜಿದ್ದಾ ಜಿದ್ದಿನ ಕಣವಾಗಿದ್ದ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್‌ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ್ದಾರೆ. ಆ ಮೂಲಕ ತಮ್ಮನ್ನು ಎದುರಾಕಿಕೊಂಡರಲೇ ಸೋಲೇ ಗತಿ ಅನ್ನೋ ಸಂದೇಶವನ್ನು ಕಾಂಗ್ರೆಸ್‌ ನಾಯಕರಿಗೆ ರವಾನಿಸದ್ದಾರೆ...

ಉಮೇಶ್ ಜಾಧವ್‌ ಗೆಲುವಿಗೆ ಕಾರಣವಾದ ಅಂಶಗಳೇನು..?

ಈ ಬಾರಿ ಕಲ್ಬುರ್ಗಿಯಲ್ಲಿ ನೇರನೇರ ಫೈಟ್‌ ಅಂತಲೇ ಹೇಳಗಿತ್ತಾದ್ರೂ ಉಮೇಶ್‌ ಜಾಧವ್‌, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗ ಹ್ಯಾಟ್ರಿಕ್‌ ಗೆಲುವಿಗೆ ಬ್ರೇಕ್‌ ಹಾಕಿದ್ದಾರೆ. ಆದ್ರೆ ಇದು ಅಷ್ಟು ಸುಲಭವಾಗಿರಲಿಲ್ಲ. ಈ ಬಾರಿ ಬಿಜೆಪಿ ನಾಯಕರು ಅಲರ್ಟ್‌ ಆಗಿರೋದನ್ನು ಕಂಡ ಕಾಂಗ್ರೆಸ್‌ ಕೂಡ ರಣತಂತ್ರಗಳನ್ನೇ ಹೆಣೆದಿತ್ತು.ಇದಕ್ಕೆ ಕಮಲದ ಹೈಕಮಾಂಡ್‌ ಮಟ್ಟದ ಸೂಚನೆ ಮೇರೆಗೆ ಕಮಲ ಕಾರ್ಯಕದ ಕಾರ್ಯಕರ್ತರು ಕೆಲಸ ಮಾಡಿದ್ದರು. ಜಾಧವ ಅವರ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯ ಅವರನ್ನು ಒಗ್ಗಟ್ಟಿನಿಂದ ಬೆಂಬಲಿಸಿತ್ತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅಲೆಯೂ ಇಲ್ಲಿ ಸಖತ್‌ ಆಗ ವರ್ಕೌಟ್ ಆಗಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಲ್ಬುರ್ಗಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಲಬುರ್ಗಿ ಅಭಿವೃದ್ಧಿಗಾಗಿ ಐಟಿ ಪಾರ್ಕ್ ನಿರ್ಮಿಸುವುದಾಗಿ ಈ ಹಿಂದೆ ಸರ್ಕಾರ ಹೇಳಿತ್ತು. ಕಲಬುರ್ಗಿ-ಬೀದರ್ ನಡುವೆ ರೈಲು ಸಂಪರ್ಕಕ್ಕೆ ಸಾಕಷ್ಟು ದಿನಗಳಿಂದ ಒತ್ತಾಯಗಳು ಕೇಳಿಬರುತ್ತಿವೆ. ಹೀಗಾಗಿ ಭಾಗಕ್ಕೆ ರೈಲು ಯೋಜನೆ ಕಲ್ಪಿಸಬೇಕಿದೆ. ಜನರಿಗೆ ವಿಮಾನದ ಮೂಲಕ ಬೆಂಗಳೂರು, ದೆಹಲಿ ಸಂಪರ್ಕಿಸೋಕೆ ಸುಲಭವಾಗಲಿದೆ ಅನ್ನೋ ಯೋಜನೆ ದಶಕಗಳಿಂದ ಕಾಗದದಲ್ಲೇ ಉಳಿದಿದೆ. ಇದನ್ನು ಇನ್ನಾದ್ರೂ ನೂತನ ಸಂಸದ ಜಾಧವ್‌ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ... 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا