Urdu   /   English   /   Nawayathi

ಮಾವೋವಾದಿಗಳ ಅಟ್ಟಹಾಸ... ಪಂಚಾಯತ್​ ಕಚೇರಿ ಸ್ಫೋಟಿಸಿ ದುಷ್ಕೃತ್ಯ

share with us

ಮಲ್ಕನಗಿರಿ (ಒಡಿಶಾ): 18 ಮೇ (ಫಿಕ್ರೋಖಬರ್ ಸುದ್ದಿ) ಮಾವೋವಾದಿಗಳು ಪಂಚಾಯತ್​ ಕಚೇರಿ ಸ್ಫೋಟಿಸಿ ಧ್ವಂಸಗೊಳಿಸಿರುವ ಘಟನೆ ಒಡಿಶಾದ ಮಲ್ಕನ್​ಗಿರಿಯ ತಿಮುರ್ಪಲ್ಲಿಯಲ್ಲಿ ನಡೆದಿದೆ. ಮಲ್ಕನ್​ಗಿರಿಯ ಮಾಥಿಲಿ ಠಾಣೆ ವ್ಯಾಪ್ತಿಯ ತಿಮುರ್ಪಲ್ಲಿಯಲ್ಲಿನ ಪಂಚಾಯತ್​ ಭವನವನ್ನು ಸ್ಫೋಟಿಸಿ ಧ್ವಂಸಗೊಳಿಸಲಾಗಿದೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಮಾವೋವಾದಿಗಳು ಬಳಿಕ ಕಚೇರಿಯ ಒಳಗಡೆ ಪ್ರವೇಶಿಸಿ ಅಲ್ಲಿದ್ದ ದಾಖಲೆ ಪತ್ರಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಭಾರೀ ಸ್ಫೋಟದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇನ್ನು ಸುಮಾರು 20ರಿಂದ 30 ಶಸ್ತ್ರಸಜ್ಜಿತ ಮಾವೋವಾದಿಗಳು ಕೃತ್ಯ ಎಸಗಿದ್ದಾರೆ. ಅಲ್ಲದೆ, ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಸ್ಥಳದಲ್ಲಿ ಬೆದರಿಕೆ ನೀಡಿ ಕರಪತ್ರ ಅಂಟಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

View image on TwitterView image on Twitter

ANI✔@ANI

Malkangiri(Odisha): Maoists have blown up Panchayat Bhawan in Timurpalli

133

10:14 AM - May 18, 2019

68 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا