Urdu   /   English   /   Nawayathi

ರಾಜೀನಾಮೆ ನಿರ್ಧಾರ ಸ್ಪಷ್ಟ... ರಮೇಶ್​ ಜಾರಕಿಹೊಳಿ ಮನವೊಲಿಸಲ್ಲ ಎಂದ ಕಾಂಗ್ರೆಸ್​

share with us

ಬೆಂಗಳೂರು: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳದಿರಲು ಕಾಂಗ್ರೆಸ್ ಪಕ್ಷ ತೀರ್ಮಾ‌ನಿಸಿದ್ದು, ಜೊತೆಗೆ ಮನವೊಲಿಕೆ ಕೂಡ ಮಾಡದಿರಲು ನಿರ್ಧರಿಸಿದೆ. ಕಾಂಗ್ರೆಸ್ ರಾಜ್ಯ ಮಟ್ಟದ ಉನ್ನತ ಮೂಲಗಳ ಪ್ರಕಾರ ಈ ಮಾಹಿತಿ ಲಭಿಸಿದ್ದು, ರಮೇಶ್ ಜಾರಕಿಹೊಳಿ ಕಾಂಗ್ರೆಸ್​ನಲ್ಲಿ ಇದ್ದುಕೊಂಡು ಸಾಕಷ್ಟು ನಷ್ಟ ಉಂಟು ಮಾಡಿದ್ದಾರೆ. ಅವರು ಇನ್ನಷ್ಟು ಸಮಯ ಮುಂದುವರಿದರೆ ಪಕ್ಷಕ್ಕೆ ಇನ್ನಷ್ಟು ಹಾನಿ ಉಂಟು ಆಗಲಿದೆ. ಇದರಿಂದ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡಬೇಕು ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ. ಇಂದು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ತಾವು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದು, ಮತ್ತೊಂದು ಉಪ ಚುನಾವಣೆಯನ್ನು ರಾಜ್ಯ ಎದುರಿಸಬೇಕಾಗಿ ಬರಲಿದೆ. ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಅವರನ್ನು ಬಿಟ್ಟುಬಿಡುವುದೇ ಕ್ಷೇಮ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಮ್ಮ ಸೋದರ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಗೆಲ್ಲಿಸಿ ಕೊಳ್ಳಬಹುದಾಗಿದೆ. ರಮೇಶ್ ಜಾರಕಿಹೊಳಿ ಶಾಸಕರಾಗಿ ಇದ್ದಷ್ಟು ಸಮಯ, ಪಕ್ಷದಲ್ಲಿದ್ದಷ್ಟೂ ಕಾಲ ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬಲ ಕಡಿಮೆ ಆಗುತ್ತಲೇ ಸಾಗಲಿದೆ. ಪಕ್ಷ ಆದಷ್ಟು ಬೇಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸತೀಶ್​ ಜಾರಕಿಹೊಳಿ ಸೂಚಿಸಿದ್ದರು. ಇದೇ ನಿಟ್ಟಿನಲ್ಲಿ ಗಮನ ಹರಿಸಿರುವ ಕಾಂಗ್ರೆಸ್ ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಆದರೆ ಇದೀಗ ಅವರ ವಿಚಾರದಲ್ಲಿ ತಟಸ್ಥವಾಗಿ ಉಳಿಯಲು ಕೈ ನಾಯಕರು ನಿರ್ಧರಿಸಿದ್ದಾರೆ.

ಬೆಂಬಲಿಗ ಶಾಸಕರ ಮನವೊಲಿಕೆ:

ಸದ್ಯ ರಮೇಶ್ ಜಾರಕಿಹೊಳಿ ಜೊತೆಗೆ ಪಕ್ಷ ಬಿಡುವ ಸಾಧ್ಯತೆ ಇರುವ ಕಾಂಗ್ರೆಸ್​ನ ಕೆಲ ಶಾಸಕರನ್ನು ಮನವೊಲಿಸಲು ಪಕ್ಷ ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಕೂಡ ಹೆಚ್ಚಿನ ಒತ್ತಡ ಹೇರದಿರಲು ಕೂಡ ಯೋಚಿಸಿದೆ. ಈ ಮೂಲಕ ರಮೇಶ್ ಜಾರಕಿಹೊಳಿ ಹಾಗೂ ಮತ್ತೆ ಕೆಲ ಅವರ ಬೆಂಬಲಿತ ಶಾಸಕರು ಪಕ್ಷ ತೊರೆದರು ಅದರಿಂದಾಗಿ ಯಾವುದೇ ನಷ್ಟ ಆಗದ ರೀತಿ ನೋಡಿಕೊಳ್ಳಲು ಪಕ್ಷದ ವರಿಷ್ಠರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا