Urdu   /   English   /   Nawayathi

ಬಾಂಬ್‌ಗಿಂತ ವೋಟರ್‌ ಐಡಿ ಹೆಚ್ಚು ಪ್ರಭಾವಶಾಲಿ: ಪ್ರಧಾನಿ ಮೋದಿ

share with us

ಅಹಮದಾಬಾದ್: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ‘ಐಇಡಿಗಿಂತಲೂ ಐಡಿ ಹೆಚ್ಚು ಪ್ರಭಾವಶಾಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಮತ ಚಲಾಯಿಸುವುದಕ್ಕೂ ಮುನ್ನ ಪಕ್ಷದ ಅಭ್ಯರ್ಥಿಯೊಂದಿಗೆ ತೆರೆದ ಜೀಪ್‌ನಲ್ಲಿ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ‘ಭಯೋತ್ಪಾದಕರ ಅಸ್ತ್ರ ಸುಧಾರಿತ ಸ್ಫೋಟಕಗಳು (ಐಡಿ), ಪ್ರಜಾಪ್ರಭುತ್ವದ ಶಕ್ತಿ ಚುನಾವಣಾ ಗುರುತು ಚೀಟಿ (ಐಡಿ). ಚುನಾವಣಾ ಆಯೋಗ ಕೊಟ್ಟಿರುವ ಐಡಿ, ಭಯೋತ್ಪಾದಕರ ಐಇಡಿಗಿಂತ ಹಲವು ಪಟ್ಟು ಹೆಚ್ಚು ಶಕ್ತಿಶಾಲಿ’ ಎಂದು ಘೋಷಿಸಿದರು. ರಾಷ್ಟ್ರೀಯ ಭದ್ರತೆಯನ್ನು ಚುನಾವಣಾ ವಿಷಯವನ್ನಾಗಿಸಿದ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ಈ ಹೇಳಿಕೆಗಳು ಮತದಾರರನ್ನು ಮತ್ತೆ ತಮ್ಮ ಪಕ್ಷದ ಮುಖ್ಯ ವಿಚಾರದತ್ತ ಸೆಳೆಯುವ ಉದ್ದೇಶ ಹೊಂದಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗಾಂಧಿನಗರದಲ್ಲಿರುವ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದುಕೊಂಡರು.

 

ಎಂದಿನಂತೆ ಬುಲೆಟ್‌ಪ್ರೂಫ್‌ ಕಾರಿನ ಬದಲು ತೆರೆದ ಜೀಪ್‌ನಲ್ಲಿ ಮೋದಿ ಮತಗಟ್ಟೆಗೆ ಬಂದರು. ಮಾರ್ಗದುದ್ದಕ್ಕೂ ಸೇರಿದ್ದ ಭಾರೀ ಸಂಖ್ಯೆ ಜನರತ್ತ ಕೈಬೀಸುತ್ತಾ ಮೋದಿ ನಿಧಾನವಾಗಿ ಸಾಗಿ ಬಂದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಅವರ ಕುಟುಂಬದ ಸದಸ್ಯರು ಮೋದಿ ಅವರನ್ನು ಅಭಿನಂದಿಸಿದರು. ಜನರತ್ತ ಕೈಬೀಸುತ್ತಲೇ ಶಾ ಮೊಮ್ಮಗಳನ್ನು ಮೋದಿ ಎತ್ತಿಕೊಂಡುದು ಕಂಡುಬಂತು.

ಮತ ಚಲಾಯಿಸಿದ ನಂತರ ಇಂಕ್ ಇದ್ದ ಬೆರಳನ್ನು ಹೆಮ್ಮೆಯಿಂದ ತೋರಿಸುತ್ತಾ, ಪಕ್ಷದ ಅಭ್ಯರ್ಥಿ ಹಂಸಮುಖ್‌ಭಾಯ್ ಸೋಮಭಾಯ್ ಪಟೇಲ್ ಅವರೊಂದಿಗೆ ಬೀದಿಗಳಲ್ಲಿ ಸಂಚರಿಸಿದರು. ಬಿಜೆಪಿಯ ಬಾವುಟ ಮತ್ತು ತೋರಣಗಳು ರಾರಾಜಿಸುತ್ತಿದ್ದವು.

Chowkidar Narendra Modi✔@narendramodi

Urging all those voting in today’s Third Phase of the 2019 Lok Sabha elections to do so in record numbers. Your vote is precious and will shape the direction our nation takes in the years to come.

I’ll be voting in Ahmedabad in a short while from now.

48.9K

6:47 AM - Apr 23, 2019

Twitter Ads info and privacy

12.7K people are talking about this

‘ಮತ ಚಲಾಯಿಸುವಾಗ ನನಗೆ ಕುಂಭ ಮೇಳದ ಸಂದರ್ಭ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವ ಭಾವ ಮೂಡುತ್ತದೆ. ನನ್ನ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಕ್ಕೆ ಹೆಮ್ಮೆಯಿದೆ. ಜನರು ಬುದ್ಧಿವಂತರು. ಯಾವುದು ಒಳಿತು, ಯಾವುದು ಸರಿಯಿಲ್ಲ ಎಂಬುದು ಅವರಿಗೆ ಗೊತ್ತಿದೆ’ ಎಂದು ಮೋದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸೇರಿದ್ದ ಜನರು ‘ಮೋದಿ ಮೋದಿ’ ಎಂದು ಗಟ್ಟಿಯಾಗಿ ಕೂಗುತ್ತಿದ್ದರು.

ಮತ ಚಲಾಯಿಸುವುದಕ್ಕೂ ಮೊದಲು ಟ್ವೀಟ್ ಮಾಡಿದ್ದ ಮೋದಿ, ‘3ನೇ ಹಂತದ ಮತದಾನ ಮಾಡಬೇಕಿರುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬರಬೇಕು. ನಿಮ್ಮ ಮತ ಅಮೂಲ್ಯ. ನಮ್ಮ ದೇಶ ಸಾಗಬೇಕಿರುವ ಹಾದಿಯನ್ನು ಅದು ನಿರ್ಧರಿಸಲಿದೆ’ ಎಂದು ಹೇಳಿದ್ದರು. 

Embedded video

ANI✔@ANI

PM Narendra Modi meets his mother Heeraben Modi at her residence in Gandhinagar and takes her blessings.

19.9K

8:03 AM - Apr 23, 2019

5,362 people are talking about this

Twitter Ads info and privacy

ಗುಜರಾತ್‌ನ ಗಾಂಧಿ ನಗರದಲ್ಲಿ ವಾಸ ಮಾಡುತ್ತಿರುವ 98ರ ಹರೆಯದ ತಮ್ಮ ತಾಯಿ ಹೀರಾಬೆನ್ ಅವರನ್ನೂ ಮೋದಿ ಭೇಟಿಯಾಗಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا