Urdu   /   English   /   Nawayathi

ಹೊರ ರಾಜ್ಯದಲ್ಲಿ ವೋಟ್ ಮಾಡಿ, ಇಲ್ಲೂ ಮತದಾನ ಮಾಡಲು ಬಂದು ಸಿಕ್ಕಿಬಿದ್ದರು..!

share with us

ಬೆಂಗಳೂರು: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಈ ಮೊದಲು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಯ ಲ್ಲಿ ಮತ ಹಾಕಿ ನಂತರ ಬೆಂಗಳೂರಿನಲ್ಲೂ ಮತ ಹಾಕಲು ಪ್ರಯತ್ನಿಸಿ ಕೆಲವರು ಸಿಕ್ಕಿಬಿದ್ದಿರುವ ಪ್ರಸಂಗಗಳು ವರದಿಯಾಗಿವೆ. ಯಲಹಂಕ, ಯಶವಂತಪುರ, ರಾಜರಾಜೇಶ್ವರಿನಗರ ಸೇರಿದಂತೆ ವಿವಿಧೆಡೆ ಈ ರೀತಿಯ ಪ್ರಕರಣಗಳು ನಡೆದಿವೆ. ಬೇರೆ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಬಹಳಷ್ಟು ಮಂದಿ ಏ.11ರಂದು ಮೊದಲ ಹಂತದ ಚುನಾವಣೆ ನಡೆದಾಗ ತಮ್ಮ ತವರೂರಿಗೆ ಹೋಗಿ ಮತ ಹಾಕಿದ್ದಾರೆ. ಮತ್ತೆ ಬೆಂಗಳೂರಿಗೆ ವಾಪಸಾಗಿದ್ದು, ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮತ ಹಾಕಲು ಪ್ರಯತ್ನಿಸಿದ್ದಾರೆ. ಈಗಾಗಲೇ ಅವರ ಬೆರಳಿಗೆ ಮತ ಹಾಕಿರುವ ಗುರುತಾಗಿ ಶಾಹಿ ಹಾಕಲಾಗಿದ್ದು, ಅದನ್ನು ನೋಡಿ ಚುನಾವಣಾಧಿಕಾರಿಗಳು ಎರಡನೇ ಬಾರಿ ಮತ ಚಲಾವಣೆಗೆ ನಿರಾಕರಿಸಿದ್ದಾರೆ. ಯಲಹಂಕದಲ್ಲಿ ಈ ರೀತಿಯ ಪ್ರಕರಣಗಳು ನಡೆದಿದ್ದು, ಸುಮಾರು 13 ಮಂದಿ ಮತದಾನಕ್ಕೆ ಪ್ರಯತ್ನಿಸಿದ ಅವರನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ 11 ಮಂದಿ ಪರಾರಿಯಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವು ನೇಕಾರಿಕೆ ವೃತ್ತಿ ಮಾಡುತ್ತಿದ್ದು, ಮೂಲತಃ ಆಂಧ್ರಪ್ರದೇಶದವರು. ಏ.11ರಂದು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ನಡೆದಿದ್ದು, ಅಲ್ಲಿ ಮತ ಹಾಕಿದ್ದೇವೆ. ಬೆಂಗಳೂರಿನಲ್ಲೂ ಮತದಾರರ ಪಟ್ಟಿಯಲ್ಲೂ ನಮ್ಮ ಹೆಸರಿದೆ. ಹಾಗಾಗಿ ಇಲ್ಲಿಯೂ ಮತ ಹಾಕಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ದೇಶಾದ್ಯಂತ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈ ರೀತಿಯ ಗೊಂದಲಗಳು ಉಂಟಾಗಿದ್ದು, ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಿದವರು ಮತ್ತೊಮ್ಮೆ ಮತ ಚಲಾಯಿಸುವ ವೇಳೆ ಸಿಕ್ಕಿ ಬೀಳುತ್ತಿದ್ದಾರೆ. ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‍ಗಢ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲ್ಲಂಗಾಣ, ತ್ರಿಪುರ, ಉತ್ತರ ಪ್ರದೇಶ್, ಪಶ್ಚಿಮ ಬಂಗಾಳ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ.

ಈ ರಾಜ್ಯಗಳ ಬಹಳಷ್ಟು ಮಂದಿ ಉದ್ಯೋಗಕ್ಕಾಗಿ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಅಲ್ಲಿಯೂ ಮತ ಹಾಕಿ ಇಲ್ಲಿಯೂ ಮತಹಾಕಲು ಯತ್ನಿಸುವ ಸಾಧ್ಯತೆಗಳನ್ನು ಮನಗಂಡಿದ್ದ ಚುನಾವಣಾ ಆಯೋಗ ಮುಂಜಾಗೃತಾ ಕ್ರಮವಾಗಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಎರಡೆರಡೆ ಬಾರಿ ಮತ ಹಾಕಲು ಅವಕಾಶ ಕೊಡದಂತೆ ಕ್ರಮ ಕೈಗೊಳ್ಳಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಬೇರೋಬ್ಬರ ಮತವನ್ನು ಚಲಾಯಿಸಿ ಹೋಗಿರುವ ಮಾಹಿತಿ ಲಭ್ಯವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا