Urdu   /   English   /   Nawayathi

ಛತ್ತೀಸ್‍ಗಢದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಸಸ್ಪೆಂಡ್..! ಕಾರಣವೇನು ಗೊತ್ತೇ..?

share with us

ಭುವನೇಶ್ವರ್: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ)ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿರುವುದು  ಖಚಿತವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಯಾಣಿಸಿದ್ದ ಹೆಲಿಕಾಫ್ಟರ್‍ನನ್ನು ತಪಾಸಣೆ ಮಾಡಿದ್ದ ಕಾರಣಕ್ಕಾಗಿ ಮೋಸಿನ್ ಅಮಾನತುಗೊಂಡಿದ್ದಾರೆ. ಏ.16ರಂದು ಪ್ರಧಾನಿ ಅವರು ಛತ್ತೀಸ್‍ಗಢದ ಸಂಬ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು. ಮೋದಿ ಅವರು ಪ್ರಯಾಣಿಸಿದ್ದ ಹೆಲಿಕಾಫ್ಟರ್‍ನನ್ನು ತಪಾಸಣೆ ಮಾಡಲು ಅವಕಾಶ ನೀಡುವಂತೆ ಮೋಸಿನ್ ಅವರು ಎಸ್‍ಪಿಜಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಮೋಸಿನ್ ಅವರಿಗೆ ಹೆಲಿಕಾಫ್ಟರ್ ತಪಾಸಣೆ ಮಾಡುವ ಅಧಿಕಾರ ಇರುವ ದಾಖಲಾತಿಗಳನ್ನು ನೀಡುವಂತೆ ಎಸ್‍ಪಿಜಿ ಅಧಿಕಾರಿಗಳು ಮರು ಪ್ರಶ್ನಿಸಿದ್ದರು. ಈ ದಾಖಲಾತಿಗಳ ವಿನಿಮಯ ಮತ್ತು ಸ್ಪಷ್ಟೀಕರಣಗಳಿಂದಾಗಿ ಸಮಯ ವಿಳಂಬವಾಗಿತ್ತು. ಕೊನೆಗೆ ಎಸ್‍ಪಿಜಿ ಅಧಿಕಾರಿಗಳು ಮೋಸಿನ್ ಅವರ ತಂಡಕ್ಕೆ ಹೆಲಿಕಾಫ್ಟರ್ ತಪಾಸಣೆ ಮಾಡಲು ಅವಕಾಶ ನೀಡಿದ್ದರು. ತಪಾಸಣೆ ಮುಗಿಯಲು ತಡವಾಗಿ ಪ್ರಧಾನಿಯವರ ಪ್ರಯಾಣ 20 ನಿಮಿಷ ವಿಳಂಬವಾಗಿತ್ತು. ಘಟನೆಯ ಬಗ್ಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಸುರೇಂದ್ರ ಕುಮಾರ್ ಅವರು ಜಿಲ್ಲಾ ಚುನಾವಣಾಧಿಕಾರಿ ಮತ್ತು ಡಿಐಜಿ ಅವರ ವರದಿ ಆಧರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದರು. ಮೊಸಿನ್ ಅವರು ಏ.4ರಿಂದ ಮೇ 23ರವರೆಗೆ ಸಂಬ್ಲಾಪುರ ಲೋಕಸಭಾ ಕ್ಷೇತ್ರದ ಕುಚಿಂದ, ರೆಂಗಲಿ, ಸಂಬ್ಲಾಪುರ, ರೈರಾಕುಲ್ ವಿಧಾನಸಭಾ ಕ್ಷೇತ್ರಗಳ ಪ್ರಧಾನ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿದ್ದರು. ಪ್ರಧಾನ ವೀಕ್ಷಕರಿಗೆ ನೇರವಾಗಿ ತಪಾಸಣೆಗೆ ಆದೇಶಿಸುವ ಅಧಿಕಾರ ಇಲ್ಲ. ಅವರು ಚುನಾವಣಾ ಆಯೋಗಕ್ಕೆ ವರದಿ ನೀಡಬೇಕು. ವರದಿ ಆಧರಿಸಿ ಆಯೋಗ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ನಿಯಮಾವಳಿಗಳಿವೆ. ಮೇಲಾಗಿ 2004ರಿಂದ ಕೆಲ ನಿಯಮಗಳು ಬದಲಾವಣೆಯಾಗಿದ್ದು, ಎಸ್‍ಪಿಜಿ ಭದ್ರತೆ ಹೊಂದಿರುವ ಅತಿ ಗಣ್ಯರ ವಾಹನಗಳನ್ನು ತಪಾಸಣೆ ಮಾಡುವಂತಿಲ್ಲ ಎಂಬ ನಿಯಮವಿದೆ. ಇದೆಲ್ಲವೂ ಮೊಹಮ್ಮದ್ ಮೋಸಿನ್ ಪ್ರಕರಣದಲ್ಲಿ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا