Urdu   /   English   /   Nawayathi

ಮಂಗನ ಹಾವಳಿಗೆ ಬೇಸತ್ತ ಜನ

share with us

ಭಟ್ಕಳ: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ತಾಲೂಕಿನ ಮುಂಡಳ್ಳಿಯಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ. ರಿಕ್ಷಾಗಳನ್ನೇ ಗುರಿಯಾಗಿಸುತ್ತಿದ್ದ ವಾನರ ಇದೀಗ ಕಾರು, ಇತರ ವಾಹನಗಳು ಹಾಗೂ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿದೆ. ಸಹಾಯಯಾಚಿಸಿ ಅರಣ್ಯ ಇಲಾಖೆಯ ಆರ್​ಎಫ್​ಒ ಅವರಿಗೆ ಕರೆ ಮಾಡಿದರೆ ಜನರ ಮೇಲೆ ರೇಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿಯ ಡಿ.ಪಿ. ರಸ್ತೆ, ದೇವಾಡಿಗಕೇರಿ, ಶಾಲೆ, ಅಂಗನವಾಡಿಯ ಬಳಿ ಕಳೆದ ಒಂದೂವರೆ ವರ್ಷದಿಂದ ಮಂಗವೊಂದು ಸಾರ್ವಜನಿಕರಿಗೆ ಉಪಟಳ ನೀಡುತ್ತಿದೆ ರಿಕ್ಷಾಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹನುಮಾನ್ ಲಂಗೂರ ಎಂಬ ಜಾತಿಗೆ ಸೇರಿದ ಕಪ್ಪು ಮುಖದ ಮಂಗ ಇದೀಗ ಜನರ ಮೇಲೂ ದಾಳಿ ಆರಂಭಿಸಿದೆ. ಮಂಗನನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿನಂತಿಸಿದರೆ ಆರ್​ಎಫ್​ಒ ಶಂಕರ ಗೌಡ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಮಂಗನ ಉಪಟಳದಿಂದ ಬೇಸತ್ತ ಗ್ರಾಪಂ ಮಾಜಿ ಅಧ್ಯಕ್ಷ ರಾಜು ನಾಯ್ಕ, ಭಟ್ಕಳ ಆರ್​ಎಫ್​ಒ ಶಂಕರ ಗೌಡ ಅವರಿಗೆ ಮಂಗಳವಾರ ಕರೆ ಮಾಡಿದ್ದಾರೆ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕಿದ್ದ ಅರಣ್ಯ ಅಧಿಕಾರಿ, ‘ನಾವೇನು ಬಂದು ಮಂಗನನ್ನು ಹಿಡಿಯಬೇಕಾ. ಮಂಗನ ಹಿಡಿಯುವವರನ್ನು ಕಳುಹಿಸಿ ಎಂದು ಬೆಂಗೂಳೂರಿಗೆ ಮನವಿ ಪತ್ರ ಕಳುಹಿಸಿದ್ದೇವೆ. ನಾವು ಮಾಡಬೇಕಾದ ಪ್ರಯತ್ನಗಳನ್ನು ಈಗಾಗಲೇ ಮಾಡಿಯಾಗಿದೆ. ಆದರೂ ನಿಮಗೆ ತೃಪ್ತಿ ಇಲ್ವಾ. ಬೆಂಗಳೂರಿನಿಂದ ಜನ ಕಳುಹಿಸುವವರೆಗೂ ನಾವೇನು ಮಾಡುವಂತಿಲ್ಲ’ ಎಂದು ತಿಳಿಸಿದ್ದು, ಸಮರ್ಪಕ ಸ್ಪಂದನೆ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಮುಂಡಳ್ಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಮಂಗನನ್ನು ಹಿಡಿಯಲು ಎಸಿಎಫ್ ಬಾಲಕೃಷ್ಣ ನೇತೃತ್ವದಲ್ಲಿ ಕುಮಟಾದ ಶಾರ್ಪ್ ಶೂಟರ್, ವೆಟರ್ನರಿ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ಪ್ರಯತ್ನಿಸಿದರೂ ಹಿಡಿತಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ಬನ್ನೇರುಘಟ್ಟದ ಅರಿವಳಿಕೆ ತಜ್ಞರ ತಂಡ ಕಳುಹಿಸಲು ಮನವಿ ಮಾಡಲಾಗಿದೆ. ಕೆಲವರು ಈಗ ದುರುದ್ದೇಶಪೂರ್ವಕವಾಗಿ ರಾತ್ರಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಯನ್ನು ಸಂರ್ಪಸಲು ತಿಳಿಸಿದ್ದೇನೆ. | ಶಂಕರಗೌಡ ಭಟ್ಕಳ ಆರ್​ಎಫ್​ಒ 

ಅರಣ್ಯ ಇಲಾಖೆ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುತ್ತಿದೆ. ಏಕಾಏಕಿ ಮಂಗಗಳನ್ನು ಕೊಲ್ಲಲು ನಮಗೆ ಅಧಿಕಾರವಿಲ್ಲ. ಒಂದು ವೇಳೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದರೆ ಸ್ಥಳೀಯರ ಬೇಡಿಕೆಯಂತೆ ಕ್ರಮ ಕೈಗೊಳ್ಳಲಾಗುವುದು. ಮಾನಸಿಕ ಸ್ಥಿಮಿತ ಕಳೆದುಕೊಂಡ ಮಂಗವೊಂದು ಇಂಥ ಚೇಷ್ಟೆ ನಡೆಸುತ್ತಿದೆ. ಕಳೆದ ವರ್ಷದಿಂದ ಮಂಗನನ್ನು ಹಿಡಿಯಲು ಬೋನ್ ಬಳಸಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ. ಸ್ಥಳೀಯರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. | ಬಾಲಕೃಷ್ಣ, ಎಸಿಎಫ್

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا