Urdu   /   English   /   Nawayathi

ರಫೆಲ್ ಒಪ್ಪಂದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ದೇಶಕ್ಕೆ ಸಂದ ಜಯ: ಕಾಂಗ್ರೆಸ್

share with us

ನವದೆಹಲಿ: 10 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ವಿಶೇಷ ಹಕ್ಕನ್ನು ನೀಡಬಾರದು ಎಂಬ ಕೇಂದ್ರ ಸರ್ಕಾರದ ಆಕ್ಷೇಪವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿರುವುದಕ್ಕೆ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದೆ. ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್, ಇದು ದೇಶಕ್ಕೆ ಸಂದ ಜಯ ಎಂದು ಹೇಳಿದೆ.

Congress✔@INCIndia

This is a victory for India! We welcome the Supreme Court’s judgement to review the Rafale petition. Satyamev Jayate!

ANI✔@ANI

Supreme Court allows admissibility of three documents in Rafale deal as evidence in re-examining the review petitions filed against the SC's December 14 judgement refusing to order probe in procuring 36 Rafale fighter jets from France. https://twitter.com/ANI/status/1115843802089054209 …

5,787

11:28 AM - Apr 10, 2019

Twitter Ads info and privacy

2,824 people are talking about this

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಮೋದಿಯವರೇ ನೀವು ಸುಳ್ಳು ಹೇಳಿ ಎಷ್ಟು ಬಾರಿಯಾದರೂ ಜನರಿಂದ ತಪ್ಪಿಸಿಕೊಳ್ಳಲು ನೋಡಬಹುದು. ಆದರೆ ಯಾವಾಗಲಾದರೂ ಸತ್ಯ ಹೊರಗೆ ಬರುತ್ತದೆ. ರಫೆಲ್ ಹಗರಣದೊಳಗಿನ ಅಸ್ಥಿಪಂಜರ ಒಂದೊಂದೇ ಬೀಳುತ್ತಾ ಹೋಗುತ್ತಿದೆ. ಇದರಿಂದ ಮುಚ್ಚಿಕೊಳ್ಳಲು ಯಾವುದೇ ರಹಸ್ಯ ಉಳಿದಿಲ್ಲ ಎಂದಿದ್ದಾರೆ.

Randeep Singh Surjewala✔@rssurjewala

Modiji, you can run and lie as much as you want,

But sooner or later the truth comes out.

The skeletons in are tumbling out one by one.

And now there is ‘no official secrets act’ to hide behind.
1/2

3,218

11:03 AM - Apr 10, 2019

Twitter Ads info and privacy

1,602 people are talking about this

ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿ, ರಫೆಲ್ ಯುದ್ಧ ವಿಮಾನ ಒಪ್ಪಂದದ ತೀರ್ಪಿನ ಪುನರ್ ಪರಿಶೀಲನೆಗೆ ನ್ಯಾಯಾಲಯ ಅನುಮತಿ ನೀಡಿದೆ. ದೇಶದ ಚೌಕಿದಾರನನ್ನು ಗಮನಿಸಲಾಗುತ್ತಿದೆ ಎಂದಿದೆ. ಬಿಎಸ್ಪಿ ನಾಯಕಿ ಮಾಯಾವತಿ, ದೇಶದಲ್ಲಿ ಸಾಮೂಹಿಕ ಸಮಸ್ಯೆ ಮತ್ತು ಭ್ರಷ್ಟಾಚಾರವನ್ನು ರಫೆಲ್ ಹಗರಣದೊಳಗೆ ಮುಚ್ಚಿಹಾಕಲು ಪ್ರಧಾನಿ ಮೋದಿ ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಂಸತ್ತಿನ ಹೊರಗೆ ಮತ್ತು ಒಳಗೆ ಪ್ರಧಾನಿ ಮೋದಿ ಸುಳ್ಳು ಹೇಳಿ ದೇಶವನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಮೋದಿಯವರು ಇನ್ನಾದರೂ ದೇಶದ ಮುಂದೆ ಕ್ಷಮೆ ಕೇಳಬೇಕು ಮತ್ತು ರಕ್ಷಣಾ ಸಚಿವೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಿಪಿಎಂ ಟ್ವೀಟ್ ನಲ್ಲಿ ರಫೆಲ್ ಯುದ್ಧ ವಿಮಾನ ಒಪ್ಪಂದದ ವಾಸ್ತವ ಸಂಗತಿಗಳನ್ನು ಮರೆಮಾಚಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪಿನ ಮೂಲಕ ದೇಶದ ಅತಿದೊಡ್ಡ ಹಗರಣದ ಸತ್ಯಾಂಶ ಹೊರಬರಲಿದೆ ಎಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا