Urdu   /   English   /   Nawayathi

ಚಿಕ್ಕಮಗಳೂರಿನಲ್ಲಿ ಸುಂಟರಗಾಳಿ ಕಾಟ: ಬೆಚ್ಚಿಬಿದ್ದ ಜನ

share with us

ಚಿಕ್ಕಮಗಳೂರು: 03 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಜಿಲ್ಲಾ ಆಟದ ಮೈದಾನದಲ್ಲಿ ಮುಗಿಲೆತ್ತರಕ್ಕೆ ಹಬ್ಬಿದ ಸುಂಟರಗಾಳಿ 5 ನಿಮಿಷಗಳ ಕಾಲ ಮೈದಾನದಲ್ಲಿ ತನ್ನ ರೌದ್ರಾವತಾರ ಪ್ರದರ್ಶಿಸಿತು. ಈ ರೌದ್ರಾವತಾರ ಅಲ್ಲಿದ್ದ ವಿದ್ಯಾರ್ಥಿ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

Heavy Tornado

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದಿದ್ದರು ಪ್ರಕೃತಿಯ ಮುಂದೆ ಏನು ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಗಾಳಿ, ನೀರು, ಬೆಳಕು, ಬೆಂಕಿ ಮುಂದೆ ಮನುಷ್ಯನ ಸಾಧನೆ ಶೂನ್ಯ. ಇದನ್ನು ನೋಡಿದರೆ ಪ್ರಕೃತಿಯಲ್ಲಿ ನಡೆಯುವ ಕೆಲ ವಿಸ್ಮಯಗಳಿಗೆ ಕಾರಣ ಹುಡುಕುತ್ತಾ ಹೊರಟರೆ ಅದು ಮೂರ್ಖತನವಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಚಿಕ್ಕಮಗಳೂರಿನಲ್ಲಿ ಈಗಾಗಲೇ 30 ರಿಂದ 33 ಡಿಗ್ರಿವರೆಗೂ ರಣ ಬಿಸಿಲಿನ ತಾಪಮಾನ ಇದೆ. ನಗರದಲ್ಲಿ ಬೀಸುತ್ತಿರುವ ಗಾಳಿ ಬೆಂಕಿಯನ್ನು ಉಗುಳುತ್ತಿದೆ. ರಣ ಬಿಸಿಲ ಮಧ್ಯೆಯೇ ಜಿಲ್ಲಾ ಆಟದ ಮೈದಾನದಲ್ಲಿ ಧೂಳಿನ ಕಣಗಳು ಮೋಡಕ್ಕೆ ಮುತ್ತಿಕ್ಕಿದ ಹಾಗೆ ಕಾಣುತ್ತಿತ್ತು. ಪ್ರಕೃತಿಯಲ್ಲಿ ನಡೆದ ಈ ವಿಸ್ಮಯ ಕಂಡು ಜನರು ಬೆಚ್ಚಿಬಿದ್ದಿದ್ದು, ಈ ತರಹದ ಬಿರುಗಾಳಿ ನಾವು ಯಾವತ್ತೂ ನೋಡಿಲ್ಲ ಅಂತಾರೆ ಸ್ಥಳೀಯರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا