Urdu   /   English   /   Nawayathi

ಮಂಗಳೂರಲ್ಲಿ ಲಿಫ್ಟ್​ನಲ್ಲಿ ಸಿಲುಕಿ ಬಾಲಕ ಸಾವು!

share with us

ಮಂಗಳೂರು: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಲಿಫ್ಟ್​ ಬಾಗಿಲು ಸರಿಯಾಗಿ ಹಾಕದೆ ಲಿಫ್ಟ್​ನಲ್ಲಿ ಸಿಲುಕಿಕೊಂಡ ಬಾಲಕ ಸಾವನ್ನಪ್ಪಿದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಮಂಜುನಾಥ್ (8)ಮೃತ ಬಾಲಕ. ಮಂಗಳೂರಿನ ಚಿಲಿಂಬಿಯ ಭಾರತಿ ಹೈಟ್ಸ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ‌. ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೂವಿನಹಡಗಲಿಯ ನೀಲಪ್ಪ ಎಂಬವರು ಈ ಅಪಾರ್ಟ್​ಮೆಂಟ್ ಕಾವಲಿಗಿದ್ದು, ಇವರ ಪುತ್ರನೇ ಲಿಫ್ಟ್​ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಹಳೆಯ ಲಿಫ್ಟ್​ ಇದಾಗಿದ್ದು, ಲಿಫ್ಟ್​ನೊಳಗೆ ಹೋಗುವಾಗ ಬಾಗಿಲು ಹಾಕದೆ ಲಿಪ್ಟ್ ಚಾಲನೆ ಮಾಡಿದಾಗ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا