Urdu   /   English   /   Nawayathi

ಅಡಿಗಾಸ್‌ ಯಾತ್ರಾದಿಂದ ಪ್ರವಾಸ,ಅಮೂಲ್ಯ ಮತದಾನ ಯೋಜನೆ

share with us

ಬೆಂಗಳೂರು: 21 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯು ಮತದಾನಕ್ಕೆ ಅನುಕೂಲವಾಗುವಂತೆ ಏ.10, 24 ಹಾಗೂ ಮೇ, ಜೂನ್‌ ತಿಂಗಳ ಪ್ರವಾಸ ದಿನಾಂಕ ಪ್ರಕಟಿಸಿದೆ. "ನಿಮ್ಮ ಆಯ್ಕೆಯ ನಂ.1 ಪ್ರವಾಸ ಮಾಡಿ, ನಂತರ ತಮ್ಮ ಅಮೂಲ್ಯವಾದ ಮತದಾನ ಮಾಡಿ ಅಥವಾ ನಿಮ್ಮ ಅಮೂಲ್ಯವಾದ ಮತದಾನ ಮಾಡಿ ನಂತರ ತಮ್ಮ ಅಯ್ಕೆಯ ನಂ.1 ಪ್ರವಾಸ ಮಾಡಿ' ಎಂಬ ಯೋಜನೆಯಡಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಯಾತ್ರಾ ಸ್ಥಳಗಳು, ಐತಿಹಾಸಿಕ ಸ್ಥಳಗಳು, ಗಿರಿಧಾಮಗಳು, ಸಮುದ್ರತೀರ ಮೊದಲಾದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸರೂಪಿಸಿದೆ ಎಂದು ಅಡಿಗಾಸ್‌ ಯಾತ್ರಾ ಸಂಸ್ಥಾಪಕ ನಾಗರಾಜ ಅಡಿಗರು ಪ್ರಕಟಣೆಯಲ್ಲಿ ತಿಳಿಸಿದರು. ವಿಮಾನ ಟಿಕೆಟ್‌, ವಿಸಾ, ಸುಸಜ್ಜಿತ ವಸತಿ, ಊಟ-ಉಪಹಾರ ಹಾಗೂ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 4 ರಿಂದ 16 ದಿನಗಳ ಪ್ರವಾಸಗಳು ಲಭ್ಯವಿದೆ. ಕೈಲಾಸ ಮಾನಸ ಸರೋವರ ಯಾತ್ರಾ 11/16 ದಿನಗಳು,ಸಿಂಗಾಪುರ, ಮಲೇಷ್ಯಾ, ಥಾಯಲ್ಯಾಂಡ್‌ ಪ್ರವಾಸ 4/7/11 ದಿನಗಳು, ನೆಪಾಳ-ಮುಕ್ತಿನಾಥ- ಪಶುಪತಿನಾಥ 5/8 ದಿನಗಳು, ಶ್ರೀಲಂಕಾ 5/7/8 ದಿನಗಳು, ಭೂತಾನ್‌ 6/8 ದಿನಗಳು, ಕಾಂಬೋಡಿಯಾ-ವಿಯಾಟ್ನಾಂ 6/7/12 ದಿನಗಳು, ದುಬೈ-ಅಬುದಾಬಿ-ಶಾರ್ಜಾ 6 ದಿನಗಳು, ಚೈನಾ 7 ದಿನಗಳು, ರಷ್ಯಾ 7 ದಿನಗಳು, ಮಾಲ್ಡಿವ್ಸ್‌ 4 ದಿನಗಳು, ಹಾಂಗ್‌ಕಾಂಗ್‌ 5 ದಿನಗಳು, ಮಕಾವು 5ದಿನಗಳು, ಮಾರೀಷಸ್‌ 7 ದಿನಗಳು, ಕಾಶ್ಮೀರ 6 ದಿನಗಳು, ಆಸ್ಸಾಂ- ಮೇಘಾಲಯ 7 ದಿನಗಳು, ತ್ರಿಪುರ 5 ದಿನಗಳು, ಚಾರಧಾಮ ಯಾತ್ರಾ 12ದಿನಗಳು  ಬದರಿನಾಥ-ಕೇದಾರನಾಥ 8 ದಿನಗಳು, ಅಮೃತಸರ್‌-ಡಾಲಹೌಸಿ-ಧರ್ಮಶಾಲಾ 7 ದಿನಗಳು, ಅಮರನಾಥ ಯಾತ್ರಾ 5/7/8 ದಿನಗಳು ಇರುತ್ತದೆ. ಪ್ರವಾಸಿಗರು ತಮ್ಮ ಆಯ್ಕೆಯ ಯಾವುದೇ ಪ್ರವಾಸ ಕಾಯ್ದಿರಿಸಿದರೂ ಮತದಾನಕ್ಕೆ ತೊಂದರೆ ಮಾಡಿಕೊಳ್ಳದಿರಲು ಮನವಿ ಮಾಡಿದರು.

ಮಾತಿಗಾಗಿ ಅಡಿಗಾಸ್‌ ಯಾತ್ರಾ, ಬೆಂಗಳೂರು, ದೂ : 080-26616678, ಮೊ: 9611600810, 9449478944 ಹಾಗೂ ವಂದೆಮಾತರಂ ಟ್ರಾವೇಲ್ಸ್‌, ಹುಬ್ಬಳ್ಳಿ, ದೂ : 0836-2256678, ಮೊ : 8095800301 ಸಂಪರ್ಕಿಸಬಹುದು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا