Urdu   /   English   /   Nawayathi

ಬಿಜೆಪಿ ವೆಬ್​ಸೈಟ್​ಗೆ​ ಕನ್ನ ಹಾಕಿದ ಕಿಡಿಗೇಡಿಗಳು! ನೀವಿನ್ನೂ ನೋಡಿಲ್ಲವೆ ಎಂದು ಕಾಲೆಳೆದ ರಮ್ಯಾ

share with us

ನವದೆಹಲಿ: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ವೆಬ್​ಸೈಟ್​ನನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.ಬಿಜೆಪಿಯ ಅಧಿಕೃತ ವೆಬ್ ಪೇಜ್ www.bjp.org  ಹ್ಯಾಕ್ ಆಗಿದ್ದು We will be come back soon! ​ ಎಂದು ತೋರಿಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹ್ಯಾಕರ್ಸ್ ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ. ಆದರೆ ಇದುವರೆಗೆ ಈ ಸಂಬಂದ್ಝ ಪಕ್ಷದ ನಾಯಕರಾರೂ ದೂರು ಸಲ್ಲಿಸಿಲ್ಲ ಅಲ್ಲವೇಹೇಳಿಕೆಗಳನ್ನು ನೀಡಿಲ್ಲ.

ಆದರೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ. ಹ್ಯಾಕ್ ಆಗಿದ್ದ ವೇಳೆ ನರೇಂದ್ರ ಮೋದಿ ಹಾಗೂ ಜರ್ಮನಿ ಚಾನ್ಸಲರ್ ಮಾರ್ಕೆಲ್​ ಜತೆಯಾಗಿರುವ ಫೋಟೋ ಕಂಡುಬಂದಿದೆ.ಅಲ್ಲದೆ ಕೆಲ ಅವಹೇಳನಕಾರಿ ಬರಹ ಸಹ ಹಾಕಲಾಗಿದೆ.

Bhaiya aur Bhehno if you’re not looking at the BJP website right now- you’re missing out

— Divya Spandana/Ramya (@divyaspandana) March 5, 2019

"ಭಾಯಿಯೋ ಔರ್ ಬೆಹನೊ, ನೀವೀಗ ಬಿಜೆಪಿ ವೆಬ್​ಸೈಟ್ ನೋಡುತ್ತಿಲ್ಲವಾದರೆ ಮುಂದೆಂದೂ ಹೀಗೆ ನೋಡಲು ಸಾಧ್ಯವಾಗದಿರಬಹುದು" ರಮ್ಯಾ ಟ್ವೀಟ್ ಮಾಡಿಕೊಂಡಿದ್ದಾರೆ. ಬಿಜೆಪಿ ಜಾಲತಾಣ ಹ್ಯಾಕರ್ಸ್ ಗಳಿಂದ ಹ್ಯಾಕ್ ಆಗಿದ್ದ ಮಾಹಿತಿಯನ್ನು ರಮ್ಯಾ ಈ ರೀತಿ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ಇದಾಗಲೇ ವಿಶೇಷ ಕಾರ್ಯತಂಡ ವೆಬ್ ತಾಣದ ಪುನರುತ್ಥಾನಕ್ಕೆ ಮುಂದಾಗಿದ್ದು ಇದೀಗ We will be come back soon! ಎಂಬ ಹೇಳಿಕೆ ಕಾಣಿಸುತ್ತಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا