Urdu   /   English   /   Nawayathi

ಗಂಡನ ಪ್ರಾಣ ಉಳಿಸಲು ಹೋಗಿ ಗುಂಡೇಟು ತಿಂದು ಜೀವಬಿಟ್ಟ ಪತ್ನಿ!

share with us

ನವದೆಹಲಿ: 02 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮದುವೆ ಸಮಾರಂಭವೊಂದರಲ್ಲಿ ಗಂಡನ ಪ್ರಾಣ ಉಳಿಸಲು ಹೋದ ಪತ್ನಿಯೊಬ್ಬರು ಗುಂಡು ತಾಗಿ ಮೃತಪಟ್ಟಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾಮಲೀಲಾ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ನಿನ್ನೆ ರಾತ್ರಿ ಸೋದರಳಿಯನ ವಿವಾಹ ಸಮಾರಂಭದಲ್ಲಿ ಸಜ್ಜನ್​ ಹಾಗೂ ಪತ್ನಿ ಸುನಿತಾ ಭಾಗಿಯಾಗಿದ್ದರು. ಈ ವೇಳೆ ಸಜ್ಜನ ಜತೆ ಸಹೋದರರಾದ ಆಕಾಶ್​ ಹಾಗೂ ಸಂದೀಪ್​ ವಾಗ್ವಾದಕ್ಕಿಳಿದಿದ್ದಾರೆ. ಘಟನೆ ತಾರಕ್ಕೇರುತ್ತಿದ್ದಂತೆ ಸಜ್ಜನ್​ ಮೇಲೆ ಗುಂಡಿನ ದಾಳಿ ನಡೆಸಲು ಅವರು ಮುಂದಾಗಿದ್ದಾರೆ. ತಕ್ಷಣ ಗಂಡನ ಎದುರು ಹೋಗಿ 32 ವರ್ಷದ ಪತ್ನಿ ಸುನಿತಾ ನಿಂತಿದ್ದರಿಂದ ಆಕೆಗೆ ಗುಂಡು ಬಿದ್ದಿದೆ ಎಂದು ಡೆಪ್ಯುಟಿ ಪೊಲೀಸ್​ ಕಮಿಷನರ್​​ ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಇವರ ನಡುವೆ ವಾಗ್ವಾದ ನಡೆದಿದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಘಟನೆ ನಡೆಯುತ್ತಿದ್ದಂತೆ ಇಬ್ಬರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا