Urdu   /   English   /   Nawayathi

ದೊಡ್ಡಣ್ಣ, ರಷ್ಯಾ, ಇಂಗ್ಲೆಂಡ್​ ಹಾಗೂ ಮಿತ್ರರಾಷ್ಟ್ರಗಳಿಗೆ ಭಾರತ ಮಾಹಿತಿ

share with us

ನವದೆಹಲಿ: 26 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ನೆಲದಲ್ಲಿ ಸರ್ಜಿಕಲ್​ ಸ್ಟ್ರೈಕ್​ ಮಾಡಿರುವ ಬಗ್ಗೆ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ಸುದ್ದಿಮುಟ್ಟಿಸಲು ಮುಂದಾಗಿದೆ. ಈ ಸಂಬಂಧ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಖಲೆ ವಿಶ್ವದ ದೊಡ್ಡಣ್ಣ ಅಮೆರಿಕ, ಬ್ರಿಟನ್​, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಟರ್ಕಿ ಹಾಗೂ ಏಷ್ಯಾದ ರಾಷ್ಟ್ರಗಳಿಗೆ ಸರ್ಜಿಕಲ್​ ಸ್ಟ್ರೈಕ್​​​ನ ಮಾಹಿತಿ ನೀಡಿದ್ದಾರೆ. ಮಂಗಳವಾರ ನಸುಕಿನ ಜಾವ ಭಾರತೀಯ ವಾಯುಪಡೆ, ಪಾಕಿಸ್ತಾನ ಹಾಗೂ ಪಾಕ್​ ಆಕ್ರಮಿತ ಕಾಶ್ಮೀರದ ಬಾಲಕೋಟ್​, ಮುಜಾಫರಾಬಾದ್​ ಹಾಗೂ ಚಕೋಠಿಯಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯನ್ನ ಪಾಕಿಸ್ತಾನ ಸೇನೆಯೇ ದೃಢ ಪಡಿಸಿತ್ತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದ ವಿದೇಶಾಂಗ  ಇಲಾಖೆ,  ಭಾರತೀಯ ಸೇನೆಯ ದಾಳಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ  ಈ ಸಂಬಂಧ ಅಮೆರಿಕ  ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಉಗ್ರರ ಕ್ಯಾಂಪ್​ಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿಯನ್ನ ಹಂಚಿಕೊಳ್ಳಲಾಗಿದೆ.  

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا