Urdu   /   English   /   Nawayathi

ಲಖನೌ: ಪ್ರಿಯಾಂಕಾ ಗಾಂಧಿ ರೋಡ್ ಶೋನಲ್ಲಿ ಭಾರೀ ಜನಸ್ತೋಮ: ರಾಹುಲ್, ರಾಹುಲ್ ಜೈಕಾರ

share with us

ಲಖನೌ: 11 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಇತ್ತೀಚಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪೂರ್ವ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶದ ರಾಜಧಾನಿಯಲ್ಲಿ ರೋಡ್ ಶೋ ನಡೆಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಐಸಿಸಿಸಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪಶ್ಚಿಮ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಡೆಸಿದ ರೋಡ್ ಶೋನಲ್ಲಿ ಭಾರೀ ಜನಸ್ತೋಮ ಕಂಡುಬಂದಿತು. ಸುಮಾರು  25 ಕಿಲೋ ಮೀಟರ್ ದೂರದವರೆಗೂ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ರಾಹುಲ್, ರಾಹುಲ್ ಎಂಬ ಜಯ ಘೋಷ ಮೊಳಗಿಸುತ್ತಿದ್ದರು. ಅಲ್ಲದೇ ಈ ಮೂವರನ್ನು ಸೆಲ್ಪಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಈ ರೋಡೋ ಶೋ ವಿಡಿಯೋವನ್ನು   ಎಐಸಿಸಿ ಟ್ವೀಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರಾದ ರಾಜ್ ಬಬ್ಬರ್,  ಆರ್ ಪಿಎನ್ ಸಿಂಗ್, ಹರೀಶ್ ರಾವತ್,  ರಾಜೀವ್ ಶುಕ್ಲಾ ಮತ್ತಿತರರು ಪಾಲ್ಗೊಂಡಿದ್ದರು. ರೋಡ್ ಶೋನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮೋದಿ  ಹಣವನ್ನು ಲೂಟಿ ಹೊಡೆದಿದ್ದು, ಚೌಕಿದಾರ್ ಚೋರ್ ಹೈ ಎಂದು ಆರೋಪಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ರಾಹುಲ್ ಗಾಂಧಿ  ಮನವಿ ಮಾಡಿಕೊಂಡರು. ಪ್ರಧಾನಿ ಮೋದಿ ಸರ್ಕಾರ ಜುಮ್ಲಾ ಸರ್ಕಾರ ಎಂದು ಟೀಕಿಸಿದ ಜ್ಯೋತಿರಾಧಿತ್ಯ ಸಿಂದಿಯಾ, ಬಾಲಿವುಡ್ ನ ಪ್ರಸಿದ್ಧ ಗೀತೆಯೊಂದರ ಮೂಲಕ  ಬಿಜೆಪಿಗೆ ಸವಾಲು ಹಾಕಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಯಾರೂ ಪೈಪೋಟಿ ನಡೆಸುತ್ತಾರೆ  ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

Embedded video

ANI UP✔@ANINewsUP

: Congress President Rahul Gandhi, Priyanka Gandhi and Jyotiraditya Scindia sit down to avoid overhanging electrical wires during their roadshow in Lucknow.

317

3:35 PM - Feb 11, 2019

184 people are talking about this

Twitter Ads info and privacy

ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಪೋಸ್ಟರ್ಗಳಲ್ಲಿ ವಾರ್ ಕಂಡುಬಂದಿದೆ. ಕಾಂಗ್ರೆಸ್ ಪಕ್ಷದ ಪೋಸ್ಟರ್ಗಳಲ್ಲಿ ರಾಹುಲ್ ಗಾಂಧಿ ಅವರನ್ನು ಮುಗುಳುನಗೆ ರೂಪದಲ್ಲಿ ಹಾಕಿದ್ದರೆ. ಬಿಜೆಪಿಯ ಪೋಸ್ಟರ್ಗಳಲ್ಲಿ  ಉತ್ತರ ಪ್ರದೇಶವನ್ನು ದೋಚಲು ಬಂದಿರುವುದಾಗಿ ಎಂಬ ಅಡಿಬರಹ ನೀಡಿ ಪೋಸ್ಟರ್ ಹಾಕಲಾಗಿದೆ. ಮತ್ತೊಂದು ಪೋಸ್ಟರ್ ನಲ್ಲಿ ಅನಿಲ್ ಅಂಬಾನಿ ಹಾಗೂ ಪ್ರಧಾನಿ ಮೋದಿ ತಬ್ಬಿಕೊಳ್ಳುತ್ತಿರುವ ಚಿತ್ರವನ್ನು ಹಾಕಲಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا