Urdu   /   English   /   Nawayathi

ನಾಗರಿಕ ವಿಮಾನ ನಿಲ್ದಾಣ ಸಂಬಂಧ ಸೀಬರ್ಡ್​ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಚರ್ಚೆ: ದೇಶಪಾಂಡೆ

share with us

ಕಾರವಾರ: 26 ಜನುವರಿ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ನಾಗರಿಕ ವಿಮಾನ ನಿಲ್ದಾಣ ಸಂಬಂಧ ನೌಕಾನೆಲೆ ಅಧಿಕಾರಿಗಳೊಂದಿಗೆ ಈಗಾಗಲೇ ಜಿಲ್ಲಾಡಳಿತ ಚರ್ಚೆ ನಡೆಸಿದ್ದು, ಇರುವ ತೊಡಕುಗಳನ್ನು ನಿವಾರಿಸಿ ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೀಬರ್ಡ್ ಆರಂಭದ ವೇಳೆ 2 ಹಂತದಲ್ಲಿ ಏರ್​ಪೋರ್ಟ್ ನಿರ್ಮಾಣ ಮಾಡುವ ಬಗ್ಗೆ ತಿಳಿಸಿತ್ತು. ಅದರಂತೆ ಇದೀಗ 2ನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ಏರ್‌ಪೋರ್ಟ್ ನಿರ್ಮಾಣದ ಕುರಿತು ಸೀಬರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ. ಇದರಿಂದ ನೌಕಾನೆಲೆ ಹಾಗೂ ನಾಗರಿಕರಿಗೆ ಅನುಕೂಲವಾಗುವಂತೆ ನಾಗರಿಕ ವಿಮಾನಯಾನ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಜಿಲ್ಲೆಗೆ ಬಂದಿರುವ ಹಲವು ಯೋಜನೆಗಳಿಂದ ಕೆಲವರಿಗೆ ತೊಂದರೆಯಾಗಿದೆ. ಇದರಿಂದ ಕೆಲವು ಜನರು ಸಹಜವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಏರ್​​ಪೋಟ್​​ನಿಂದ ಸಾಕಷ್ಟು ಅಭಿವೃದ್ಧಿಯಾಗಿರುವುದರಿಂದ ಈ ಬಗ್ಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಡಿಮೆ ಪ್ರಮಾಣದ ಜನರಿಗೆ ತೊಂದರೆಯಾಗುವ‌ ರೀತಿಯಲ್ಲಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಮಂಗನ ಕಾಯಿಲೆ ಉತ್ತರ ಕನ್ನಡ ಸೇರುದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಕಂಡುಬಂದಿದೆ. ಜಿಲ್ಲೆಯ ಸಿದ್ದಾಪುರ, ಶಿರಸಿ ಮತ್ತು ಇದೀಗ ಬನವಾಸಿಯಲ್ಲಿಯೂ ಮಂಗನ ಕಾಯಿಲೆ ಹರಡಿದೆ. ಆದರೆ ಈಗಾಗಲೇ ಮಂಗಗಳು ಸಾವನ್ನಪ್ಪಿದ ಪ್ರದೇಶದ ಸುತ್ತಮುತ್ತಲಿನ ಐದು ಕಿ.ಮೀ. ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್‌ ಮಾಡಲಾಗುತ್ತಿದೆ. ಆದರೆ ಔಷಧ ಕಡಿಮೆಯಾಗಿದ್ದು, ಜಿಲ್ಲಾಡಳಿತ ಇದನ್ನು ತರುವುದಕ್ಕೆ  ಕ್ರಮ ಕೈಗೊಂಡಿದೆ. ದೇಶದಲ್ಲಿ ಏಕೈಕ ಔಷಧಿ ತಯಾರಿಕಾ ಕೇಂದ್ರವಿರುವುದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು. ಕಾರವಾರದಲ್ಲಿ ನಡೆದ ಬೋಟ್ ದುರಂತದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ತನಿಖೆ ಆರಂಭಿಸಿದ್ದಾರೆ. ಮುಂದೆ ಇಂತಹ ಸಮಸ್ಯೆಗಳು ಆಗದಂತೆ ನೀರಿಗೆ ಇಳಿಯುವ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿಯಮಗಳನ್ನು ರೂಪಿಸಬೇಕಿದೆ. ಈಗಾಗಲೇ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ಹೇಳಿದರು. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا