Urdu   /   English   /   Nawayathi

ಸಾಲ ಕೊಡುವುದಾಗಿ ವಿಧಾನಸೌಧದಲ್ಲೇ ಡೀಲ್ ಮಾಡಿದ್ರಂತೆ​... ಕೊನೆಗೆ ಪಂಗನಾಮ ಹಾಕಿ ಕಾಲ್ಕಿತ್ರು!

share with us

ಬೆಂಗಳೂರು: 22 ಜನುವರಿ (ಫಿಕ್ರೋಖಬರ್ ಸುದ್ದಿ) ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಂಬಿಸಿ ರಾಜಧಾನಿಯಲ್ಲಿ ರಮೇಶ್ ಎಂಬುವವರಿಗೆ 1.20 ಕೋಟಿ ಹಣವನ್ನು ಪಂಗನಾಮ ಹಾಕಲಾಗಿದೆ. ರಮೇಶ್ ಕ್ಯಾಶುನೆಟ್ ವ್ಯವಹಾರ ನಡೆಸಲು 100 ಕೋಟಿ ಸಾಲ ಕೊಡಿಸುವಂತೆ ಪರಿಚಯಸ್ಥೆ ಇಂದಿರಾ ಎಂಬುವವರನ್ನು ಕೇಳಿದ್ದರಂತೆ. ಈ ಹಿನ್ನೆಲೆ ಇಂದಿರಾ, ಇಳಮದಿ ಎಂಬುವವರನ್ನ ಪರಿಚಯ ಮಾಡಿಸಿದ್ದರು. ಇಳಮದಿ ರಮೇಶ್​ಗೆ ಸುಂದರಂ, ಸೆಲ್ವಂ, ಅಜಯ್, ಕೆ.ಕೆ.ಶೆಟ್ಟಿಯನ್ನ ಪರಿಚಯಿಸಿದಾಗ ಸಾಲ ಕೊಡಿಸುವುದಾಗಿ ವಿಧಾನಸೌಧದ 1 ಮಹಡಿಯಲ್ಲಿ ಮಾತುಕತೆ ನಡೆಸಲಾಗಿತ್ತಂತೆ. ನಂತರ ನಾಲ್ವರು ಆರೋಪಿಗಳು ಸ್ಟಾಂಪ್ ಚಾರ್ಜ್​ಗೆಂದು 1.12% ಹಣವನ್ನ ನೀಡುವಂತೆ ರಮೇಶ್​ಗೆ ತಿಳಿಸಿದ್ದು, ಬೆಂಗಳೂರಿನ ಓಬಿರಾಯ್ ಹೋಟೆಲ್​ನಲ್ಲಿ ಮಾತುಕತೆ ನಡೆಸಿದ್ದರು. ಇಲ್ಲಿ ರಮೇಶ್​ ಅವರ ಫೋಟೋ, ಕೆಲವು ಡಾಕ್ಯುಮೆಂಟ್ ಸೇರಿ 5 ಚೆಕ್​ಗಳನ್ನ ಪಡೆದುಕೊಂಡಿದ್ದರು. ನಂತರ ರಮೇಶ್​ ಆರೋಪಿಗಳಿಗೆ 1 ಕೋಟಿ 20 ಲಕ್ಷ ಹಣವನ್ನ ನೀಡಿದ್ದು, ಸಾಲದ ಮೊತ್ತವನ್ನ ತರುವುದಾಗಿ ಹೇಳಿ ಹೋದ ನಾಲ್ವರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಇತ್ತ ಸಾಲವು ಇಲ್ಲದೇ, ಕೈಯಲಿದ್ದ ಹಣವನ್ನು  ಕಳೆದುಕೊಂಡು ಮೋಸ ಹೋದ ರಮೇಶ್ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا