Urdu   /   English   /   Nawayathi

ಸಚಿವರು ಪುರುಷನೇ ಆಗಿದ್ದರೂ ನಾನಿದನ್ನೇ ಹೇಳುತ್ತಿದ್ದೆ: ನಿರ್ಮಾಲಾ ಬಗೆಗಿನ ಟೀಕೆಗೆ ರಾಹುಲ್ ಸ್ಪಷ್ಟನೆ

share with us

ನವದೆಹಲಿ: 13 ಜನುವರಿ (ಫಿಕ್ರೋಖಬರ್ ಸುದ್ದಿ) ರಾಫೆಲ್ ಒಪ್ಪಂದ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಳೆದ ವಾರ ರಾಹುಲ್ ಗಾಂಧಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಭಾನುವಾರ ಮತ್ತೆ ರಾಹುಲ್ ಸಮರ್ಥಿಸಿಕೊಂಡಿದ್ದಾರೆ. ರಕ್ಷಣಾ ಸಚಿವರು ಒಂದೊಮ್ಮೆ ಪುರುಷರಾಗಿದ್ದರೂ ಸಹ ನಾನು ಇದೇ ರೀತಿ ಮಾತನಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಇನ್ನು ಪ್ರಧಾನಿ ಮೋದಿ ಸೀತಾರಾಮನ್ ಅವರನ್ನು ರಕ್ಷಿಸುವ ಬದಲುಅವರಿಂದಲೇ ತಾವು ರಕ್ಷಣೆ ಪಡೆದಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ಅನಿಲ್ ಅಂಬಾನಿ 30 ಸಾವಿರ ಕೋಟಿ ರೂ. ಕಳ್ಳತನ ಮಾಡಲು ಮೋದಿ ಸಹಾಯ ನೀಡಿದ್ದಾರೆ ಮತ್ತು ಅವರು ಲೋಕಸಭೆಯಲ್ಲಿ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದಕ್ಕಾಗಿ ಅವರೊಬ್ಬ ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದಾರೆ.  ನಿರ್ಮಲಾ ಸೀತಾರಾಮನ್ ಕುರಿತ ರಾಹುಲ್ ಹೇಳಿಕೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ರಾಹುಲ್ ಗಾಂಧಿಗೆ ನೋಟೀಸ್ ಜಾರಿ ಮಾಡಿತ್ತು. ಒಂದು ವೇಳೆ ರಕ್ಷಣಾ ಸಚಿವರು ಪುರುಷರೇ ಆಗಿದ್ದರೂ ನಾನು ಇದೇ ಮಾತನ್ನು ಹೇಳುತ್ತಿದ್ದೆ.ನನ್ನ ಮೇಲೆ ವ್ಯಥಾ ಲಿಂಗಬೇಧದ ಆರೋಪ ಹೊರಿಸಬೇಡಿ. ಪ್ರಧಾನಿಗಳು ಈ ಕುರಿತಂತೆ ಸ್ಪಷ್ಟತೆ ಕೊಡಬೇಕಿತ್ತು. ಆದರೆ ಅವರಿಗೆ ಆ ಧೈರ್ಯವಿಲ್ಲ. ಲೋಕಸಭೆಯಲ್ಲಿ ರಾಫೆಲ್ ಕುರಿತು ಪ್ರಧಾನಿ ಬದಲಿಗೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಮಾತನಾಡಿ ರಾಫೆಲ್ ಒಪ್ಪಂದವನ್ನು ಸಮರ್ಥಿಸಿಕೊಂಡರು.ಸಚಿವರು ಪ್ರಧಾನಿಯವರ ಹೇಳಿಕೆಯನ್ನೇಕೆ ತಾವು ಹೇಳಿದರೆನ್ನುವುದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಎಂದು ಗಾಂಧಿ ಹೇಳಿದ್ದಾರೆ.

ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ನಿರ್ಮಲಾ ಸೀತಾರಾಮನ್ ಕುರಿತು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಪ್ರಧಾನಿಗಳು ಮಹಿಳಾ ರಕ್ಷಣಾ ಸಚಿವರ ಹಿಂದೆ ಅಡಗಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು. ರಾಫೆಲ್ ಕುರಿತು ಲೋಕಸಭೆಯಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಾವು ಪ್ರಧಾನಿಗೆ ಕೇಳಿದೆವು ಆದರೆ ಪ್ರಧಾನಿ ಲೋಕಸಭೆಗೆ ಒಂದು ನಿಮಿಷದಷ್ಟು ಸಮಯಕ್ಕಾಗಿಯೂ ಹಾಜರಾಗಿಲ್ಲ.ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಎರಡುವರೆ ಗಂಟೆಗಳ ಕಾಲ ಮಾತನಾಡಿದರು, ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ. ನಾವು ಅವರ ವಾದಗಳನ್ನು ಬದಿಗೆ ಸರಿಸಿದ್ದೇವೆ, ಆದರೆ ಪ್ರಧಾನಿಗಳು ಲೋಕಸಭೆಯಲ್ಲಿ ಮುಖ ತೋರಿಸಲಿಲ್ಲ. ಅವರು ತಮ್ಮನ್ನು ರಕ್ಷಿಸುವಂತೆ ಮಹಿಳೆಯೊಬ್ಬರ ಬಳಿ ಕೇಳಿಕೊಂಡಿದ್ದರು. ಅದರಂತೆ ಆಕೆ ಪ್ರಧಾನಿಗಳನ್ನು ಎರಡೂವರೆ ಗಂಟೆಯ ಕಾಲ ರಕ್ಷಿಸಿದ್ದು ಹೇಗೆಂದು ನೀವೆಲ್ಲಾ ನೋಡಿದ್ದಿರಿ ಎಂದು ರಾಹುಲ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا