Urdu   /   English   /   Nawayathi

ಗೋವಿನ ಹೆಸರಲ್ಲಿ ವೋಟು ಕೇಳುವವರೇ, ಅವುಗಳಿಗೆ ಮೊದಲು ಮೇವು ಕೊಡಿ: ಕೇಜ್ರಿವಾಲ್ ಚಾಟಿ

share with us

ನವದೆಹಲಿ: 12 ಜನುವರಿ (ಫಿಕ್ರೋಖಬರ್ ಸುದ್ದಿ) ಗೋವುಗಳ ಹೆಸರು ಹೇಳಿಕೊಂಡು ವೋಟು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವವರು ಅವುಗಳಿಗೆ ಮೇವು ನೀಡುವ ಕಾರ್ಯವನ್ನೂ ಮಾಡಬೇಕು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಬಿಜೆಪಿಯತ್ತ ಚಾಟಿ ಬೀಸಿದರು. ರಾಷ್ಟ್ರ ರಾಜಧಾನಿ ಬವನ ನಗರದಲ್ಲಿ ನಿರ್ಮಿಸಲಾದ ಶ್ರೀ ಕೃಷ್ಣ ಗೋಶಾಲೆಗೆ  ಅಭಿವೃದ್ಧಿ ಸಚಿವ ಗೋಪಾಲ್​  ರಾಯ್​ರೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಆಮ್​ ಆದ್ಮಿ ಪಕ್ಷವು ಗೋವುಗಳ ಹೆಸರಿನಲ್ಲಿ ವೋಟು ಕೇಳುವುದಿಲ್ಲ ಎಂದು ಹೇಳಿದರು. ಗೋಶಾಲೆಯ ಪ್ರತಿನಿಧಿ ಕಳೆದ ಎರಡು ವರ್ಷಗಳಿಂದ ತಮಗೆ ಬಿಜೆಪಿ ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಬಳಿ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್​ ಬಿಜೆಪಿಗೆ ಟಾಂಗ್​ ನೀಡಿದರು. ದೆಹಲಿ ಸರ್ಕಾರವು ಎಲ್ಲಾ ಗೋಶಾಲೆಗಳಿಗೆ ಸಮನಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಈ ಗೋಶಾಲೆ ಮಾತ್ರ ಹಣ ಬಂದಿಲ್ಲ. ಗೋವುಗಳ ಹೆಸರಲ್ಲಿ ವೋಟು ಕೇಳುವವರು, ಅವುಗಳಿಗೆ ಮೇವು ನೀಡುವ ಕಾರ್ಯದಲ್ಲಿ ತೊಡಗಬೇಕು.  ಗೋವುಗಳ ಹಸರಲ್ಲಿ ರಾಜಕೀಯ ಮಾಡಬಾರದು ಎಂದು ಪ್ರತಿಕ್ರಿಯಿಸಿದರು. 

ಮುಂದಿನ ವಾರ ಹರಿಯಾಣಕ್ಕೂ ಪ್ರಯಾಣ ಬೆಳೆಸುವುದಾಗಿ ಹೇಳಿದ ಕೇಜ್ರಿವಾಲ್​, ನೆರೆ ರಾಜ್ಯದಲ್ಲಿಯೂ ತಮ್ಮ ಪ್ರಭಾವ ವಿಸ್ತರಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا