Urdu   /   English   /   Nawayathi

ಬರೋಬ್ಬರೀ 30 ವರ್ಷಗಳಿಂದ ಕೇವಲ ಟೀ ಕುಡಿದು ಬದುಕುತ್ತಿರುವ ಮಹಿಳೆ ಈಕೆ!

share with us

ಕೊರಿಯಾ: 12 ಜನುವರಿ (ಫಿಕ್ರೋಖಬರ್ ಸುದ್ದಿ) ಚಳಿಗಾಲದಲ್ಲಿ  ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ? ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ, ಅವರ ಆರೋಗ್ಯ ಕೂಡ ಚೆನ್ನಾಗಿಯೇ ಇದೆ. ಕೊರಿಯಾ ಜಿಲ್ಲೆಯ ಬರಾದಿಯಾ  ಗ್ರಾಮದ ಪಿಲ್ಲಿ ದೇವಿ, 11 ವರ್ಷ ವಯಸ್ಸಿದ್ದಾಗ ಆಹಾರ ತ್ಯಜಿಸಿದ ಆಕೆ, ಅಂದಿನಿಂದ ಟೀ ಕುಡಿದೇ ಬದುಕುತ್ತಿದ್ದಾಳೆ, ಇಡೀ ಗ್ರಾಮದಲ್ಲಿ ಪಿಲ್ಲಿ ದೇವಿ ಚಾಯ್ ವಾಲಿ ಚಾಚಿ ಎಂದೇ ಪ್ರಸಿದ್ದಳಾಗಿದ್ದಾಳೆ. ಆಕೆ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಯಾವುದೇ ಆಹಾರ ಸೇವಿಸದಿರಲು ನಿರ್ಧರಿಸಿದಳು,ಅಂದಿನಿಂದ ಆಕೆ ಏನನ್ನೂ ಸೇವಿಸುತ್ತಿಲ್ಲ ಎಂದು ಆಕೆಯ ತಂದೆ ರತಿ ರಾಮ್ ಹೇಳಿದ್ದಾರೆ. ಆಕೆ ಒಂದು ದಿನ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ತೆರಳಿದ್ದಳು, ಅಂದು ವಾಪಸ್ ಬಂದಾಗಿನಿಂದ ಆಕೆ ನೀರು ಮತ್ತು ಆಹಾರ ತ್ಯಜಿಸಿದಳು ಎಂದು ಅವರು ತಿಳಿಸಿದ್ದಾರೆ.

ಮೊದಲಿಗೆ ತಮ್ಮ ಮಗಳು ಟೀ ಜೊತೆ ಬಿಸ್ಕಿಟ್ಸ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಕೆಲ ತಿಂಗಳ ನಂತರ ಅದನ್ನು ತಿನ್ನುವುದನ್ನು ಬಿಟ್ಟಳು, ನಂತರ ಆಕೆ ಯಾವುದಾದರೂ ರೋಗದಿಂದ ಬಳಲುತ್ತಿದ್ದಾಳೆಯೇ ಎಂಬ ಬಗ್ಗೆ ವೈದ್ಯರ ಬಳಿ ಪರೀಕ್ಷಿಸಿದೆವು, ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ ಎಂದು ವೈದ್ಯರು ದೃಢ ಪಡಿಸಿದರು ಎಂದು ಆಕೆಯ ಸಹೋದರ ತಿಳಿಸಿದ್ದಾರೆ. ಮನೆಯಿಂದ ಆಕೆ ಹೊರ ಹೊಗುವುದು ಅಪರೂಪ,ಯಾವಾಗಲೂ ಶಿವಧ್ಯಾನದಲ್ಲಿ ಮುಳುಗಿರುತ್ತಾಳೆ, ಮಾನವ ದೇಹ ಕೇವಲ ಟೀ ಕುಡಿದು 33 ವರ್ಷ ಬದುಕುವುದು ವೈಜ್ಞಾನಿಕವಾಗಿ  ಅಸಾಧ್ಯ, ಆದರೆ ಇದೊಂದು ಪವಾಡ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا