Urdu   /   English   /   Nawayathi

ಅಕ್ರಮ ಮರಳುಗಾರಿಕೆ: ಹೊಳಲ್ಕೆರೆ ಶಾಸಕರಿಂದ ಪೋಲೀಸ್ ಠಾಣೆಗೆ ಮುತ್ತಿಗೆ ಎಚ್ಚರಿಕೆ

share with us

ಚಿತ್ರದುರ್ಗ: 07 ಜನುವರಿ (ಫಿಕ್ರೋಖಬರ್ ಸುದ್ದಿ) ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪೋಲೀಸರೆದುರೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಬೆನ್ನಲಿಯೇ ಇನ್ನೋರ್ವ ಶಾಸಕ ಸಹ ಪೋಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಹೊಳಲ್ಕೆರೆಯ ಶಾಸಕ ಬಿಜೆಪಿಯ ಚಂದ್ರಪ್ಪ, "ಜಿಲ್ಲೆಯಲ್ಲಿ ನಡೆಯುವ ಅಕ್ರ್ಮ ಮರಳು ದಂಧೆಯನ್ನು ಪೋಲೀಸರು ನಿಲ್ಲಿಸದಿದ್ದರೆ ಪೋಲೀಸ್ ಠಾಣೆಗೆ ಪಿಕಿಟಿಂಗ್ ನಡೆಸಲಾಗುವುದು" ಎಂದಿದ್ದಾರೆ. ಜಿಲ್ಲೆಯ ಪ್ರತಿ ಪೋಲೀಸ್ ಠಾಣೆಗೆ ಸಾವಿರಾರು ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕುವ ದಿನವೂ ದೂರವಿಲ್ಲ ಎಂದ ಚಂದ್ರಪ್ಪ ಅಗತ್ಯ ಬಿದ್ದಲ್ಲಿ ಬಿಜೆಪಿ ಜಿಲ್ಲಾ ಘಟಕ ಚಿತ್ರದುರ್ಗ ಜಿಲ್ಲೆ ಬಂದ್ ಮಾಡಿ ಪೋಲೀಸರಿಗೆ ತಕ್ಕ ಪಾಠ ಕಲಿಸಲಿದೆ ಎಂದರು. ಪ್ರಧಾನ ಮಂತ್ರಿ ಮೋದಿಯವರ ಕನಸಿನಂತೆ 2022 ರ ಹೊತ್ತಿಗೆ ಎಲ್ಲಾ ದೇಶವಾಸಿಗಳಿಗೆ ಸ್ವಂತ ಮನೆ ಕಟ್ಟುವ ಕಲ್ಪನೆಗೆ ಜಿಲ್ಲೆಯ ಅಧಿಕಾರಿಗಳು ಅಡ್ಡಿಯಾಗಿದ್ದಾರೆ ಎಂದು ಶಾಸಕ ಹೇಳಿದರು.

ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸಹಕಾರ ನೀಡದೆ ಹೋದಲ್ಲಿ  ಆಂದೋಲನವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ ಅವರು ಅಕ್ರಮ ಗಣಿಗಾರರ ಜೊತೆ ಸಂಪರ್ಕ ಬೆಳೆಸದಂತೆ ಪೋಲೀಸರಿಗೆ ಎಚ್ಚರಿಸಿದ್ದಾರೆ.ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವರು ಕಾನೂನುಬಾಹಿರ ಮರಳು ಗಣಿಗಾರಿಕೆ  ನಡೆಸುವುದಕ್ಕೆ ಸಹಕಾರ ನೀಡಿದ್ದಾರೆ.ಅತಿಯಾದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಚಂದ್ರಪ್ಪ ಆರೋಪಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಎಂ ಮೇಲೆ ಹರಿಹಾಯ್ದ ಚಂದ್ರಪ್ಪ, ಅರುಣ್ ಮೊದಲಿಗೆ ತಮ್ಮ ಲಂಚದ ಪ್ರಮಾಣವನ್ನು ಅಧಿಕಗೊಳಿಸಿಕೊಳ್ಳುವುದಕ್ಕೆ ಹೊಂಚು ಹಾಕಿದ್ದರು. ಹಾಗಾಗಿ ಅವರು ಅಕ್ರಮ ಗಣಿಗಾರಿಕೆ ವಿರುದ್ದ್ಧ ಹೋರಾಡಿದವರಂತೆ ತೋರ್ಪಡಿಸಿಕೊಂಡರು. ಈಗ ಅಕ್ರ್ಮ ಮರಳುಗಾರಿಕೆ ನಡೆಸುವವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅವರು ವಿವರಿಸಿದರು.

ಹೊಸದುರ್ಗ ಬಂದ್ ವಿಫಲ

ಬಿಜೆಪಿಯ ಹೊಸದುರ್ಗ ತಾಲ್ಲೂಕು ಘಟಕ ಕರೆ ನೀಡಿದ್ದ ಹೊಸದುರ್ಗ ಬಂದ್ ವಿಫಲವಾಗಿದೆ.ರೆ ವಾಹನಗಳು ಎಂದಿನಂತೆ ಚಲಿಸುತ್ತಿದ್ದು ವ್ಯಾಪಾರ ವಹಿವಾಟು ಸಾಮಾನ್ಯ ದಿನದಂತೆಯೇ ಇತ್ತು. ಏತನ್ಮಧ್ಯೆ ಚಿತ್ರದುರ್ಗ ಉಪ ಕಮೀಷನರ್ ವಿನೋತ್ ಪ್ರಿಯಾ ಪತ್ರಿಕೆಗೆ ಮಾತನಾಡಿ ಇಲ್ಲಿನ ಮರಳು ಗಣಿಗಾರಿಕೆಯಲ್ಲಿ ಯಾವ ಅಕ್ರಮ ನಡೆದಿಲ್ಲ, ಪ್ರತಿ ವಾಹನವನ್ನು ಸೂಕ್ಷ್ಮ ತಪಾಸಣೆ ನಡೆಸಲಾಗುತದೆ ಎಂದರು. ಗೂಳಿಹಟ್ಟಿ ಶೇಖರ್ ಘಟನೆಗೆ ಸಂಬಂಧಿಸಿ ಮಾತನಾಡಿದ ಅವರು "ಈ ವಿಚಾರ ಅವರ ವೈಯುಕ್ತಿಕ, ಅವರನ್ನೇ ಕೇಳಿ" ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا