Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ವಾಷಿಂಗ್ಟನ್: 11 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮೊಬೈಲ್ ಜೇಬಿನಲ್ಲಿದ್ದಾಗ ಅಕಸ್ಮಾತ್ ಯಾರಿಗೋ ಕಾಲ್ ಹೋಗಿ, ಅವರು ಹಲೋ ಹಲೋ ಎಂದು ಹೇಳಿ ಬೈದು ಕೊಳ್ಳೋದು, ಯಾರ್ಯಾರಿಗೋ ಏನೇನೋ ಸಂದೇಶ ಕಳುಹಿಸಿ, ಬಳಿಕ "ಸಾರಿ' ಕೇಳ್ಳೋದು ಸರ್ವೆ ಸಾಮಾನ್ಯ. ಆದರೆ, ನಿದ್ದೆಗಣ್ಣಿನಲ್ಲಿ ಸಂದೇಶ ಕಳುಹಿಸಿ, ಬೆಳಗೆ ಎದ್ದಾಗ ಮುಜುಗರಕ್ಕೊಳಗಾಗುವ ಘಟನೆಗಳು ಇತ್ತೀಚೆಗಿನ ದಿನಗಳಲ್ಲಿ ಜಾಸ್ತಿಯಾಗುತ್ತಿವೆಯಂತೆ. ಇದೊಂದು ಮನೋರೋಗ ಎಂದು ಅಭಿಪ್ರಾಯ ಪಟ್ಟಿರುವ ಅಧ್ಯಯನ ತಂಡವೊಂದು, ಕಾಲೇಜು ವಿದ್ಯಾರ್ಥಿಗಳನ್ನು ಈ ಸಮಸ್ಯೆ ಮಿತಿಮೀರಿ ಕಾಡುತ್ತಿದೆ ಎಂದು ಹೇಳಿದೆ.
ಅಮೆರಿಕದ ವಿಲ್ಲಾನೋವಾ ವಿಶ್ವವಿದ್ಯಾಲಯದ ತಂಡ ನಡೆಸಿದ ಅಧ್ಯಯನ ವರದಿಯಲ್ಲಿ ಈ ಬಗ್ಗೆ ಉಲ್ಲೇಖೀಸಲಾಗಿದೆ. ಸದಾ ಕಾಲ ಮೊಬೈಲ್ ಹಿಡಿದಿರುವ ಬಹುತೇಕ ಯುವಕ-ಯುವತಿಯರು, ಅದ ರಲ್ಲೂ ಕಾಲೇಜು ವಿದ್ಯಾರ್ಥಿಗಳು ಮಲಗುವ ವೇಳೆಯಲ್ಲೂ ಮೊಬೈಲ್ ಬಿಟ್ಟಿರುವುದಿಲ್ಲ. ನಿದ್ದೆಗಣ್ಣಿನಲ್ಲಿಯೂ ಮೊಬೈಲ್ ಕೈಗೆತ್ತಿಕೊಂಡು ಸಾಮಾಜಿಕ ಜಾಲ ತಾಣಗಳನ್ನು ಬಳಸುವ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಇದರ ಪರಿಣಾಮ ಅವರ ನಿದ್ದೆಯ ಮೇಲೆ ಆಗುತ್ತಿದ್ದು, ನಿದ್ದೆಯಲ್ಲೇ ಏನೇನೋ ಸಂದೇಶ ರವಾನಿಸುತ್ತಿದ್ದಾರೆ. ಆದರೆ ನಿದ್ದೆಗಣ್ಣಿನಲ್ಲಿ ಅವರಿಂದಾದ ಯಾವ ಕ್ರಿಯೆಯ ಅರಿವೂ ಬೆಳಗ್ಗೆ ಎದ್ದಾಗ ಅವರಿಗಿರುವುದಿಲ್ಲ ಎಂದು ಈ ವರದಿ ಹೇಳಿದೆ. ಅಚ್ಚರಿ ಎಂದರೆ, ಗಾಢ ನಿದ್ರೆಯಲ್ಲೂ ಮೊಬೈಲ್ ಮೂಲಕ ಸಂದೇಶ ರವಾನಿಸುವ ಘಟನೆಗಳು ಜಾಸ್ತಿಯಾಗುತ್ತಿವೆ ಎಂಬ ಆತಂಕಕಾರಿ ಅಂಶವನ್ನು ವರದಿಯಲ್ಲಿ ದಾಖಲಿಸಲಾಗಿದೆ.
ಉ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |