Urdu   /   English   /   Nawayathi

ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಂಪುಟಕ್ಕೂ ಅತಿದೊಡ್ಡ ಹಾನಿ- ಯಶವಂತ್ ಸಿನ್ಹಾ

share with us

ಕೊಲ್ಕತ್ತಾ: 10 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸಂಪುಟ ಸೇರಿದಂತೆ ದೇಶದಲ್ಲಿನ ಪ್ರಮುಖ ಸಂಸ್ಥೆಗಳನ್ನು  ನರೇಂದ್ರ ಮೋದಿ ಸರ್ಕಾರ ನಾಶಪಡಿಸುತ್ತಿದೆ ಎಂದು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಐಡಿಯಾ ಆಫ್ ಬೆಂಗಾಲ್ ಟಾಕ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಮುಖ ಮಸೂದೆಯನ್ನು ಅಂಗೀಕರಿಸುವ ಸಮಯದಲ್ಲಿ ರಾಜ್ಯಸಭೆಯನ್ನು "ಹಾಳುಮಾಡಲು  ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ ಎಂದು  ಆರೋಪಿಸಿದರು. ರಾಫೆಲ್ ಯುದ್ಧ ವಿಮಾನ ಒಪ್ಪಂದವಾಗಿರಬಹುದು ಅಥವಾ ನೋಟ್ ಅಮಾನ್ಯತೆ ನಂತಹ  ಅನೇಕ ಪ್ರಮುಖ ನಿರ್ಧಾರಗಳನ್ನು  ಸಂಪುಟಕ್ಕೆ ಮಾಹಿತಿ ನೀಡದೆ ತೆಗೆದುಕೊಳ್ಳಲಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಯಾರೂಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ನಿರ್ವಹಿಸಿದ್ದರು ಎಂದು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಬಿಜೆಪಿ  ಬಹುಮತವಿಲ್ಲ ಹೊಂದಿಲ್ಲದಿರುವುದರಿಂದ ಪ್ರಮುಖ ಮಸೂದೆ ಅಂಗೀಕರಿಸುವ ಸಮಯದಲ್ಲಿ ರಾಜ್ಯಸಭೆಯನ್ನು "ಹಾಳುಮಾಡಲು ನರೇಂದ್ರ ಮೋದಿ ಯತ್ನಿಸುತ್ತಿದ್ದು, ಸಂಸತ್ತಿಗೆ ಎರಡನೇ ಹಾನಿಯಾಗಿದೆ ಎಂದು ಸಿನ್ಹಾ  ಹೇಳಿದರು. ನೋಟ್ ಅಮಾನ್ಯತೆಯನ್ನು ವಿಪತ್ತು ಎಂದು ಕರೆದಿರುವ ಸಿನ್ಹಾ, ತನ್ನ ಆರ್ಥಿಕ ನೀತಿಯ ವೈಫಲ್ಯಗಳನ್ನು ಮರೆ ಮಾಚಲು  ಆರ್ಥಿಕ ಬೆಳವಣಿಗೆಯ ಅಂಕಿ ಅಂಶಗಳನ್ನು  ನೀಡಲು  ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲಿನಲ್ಲಿ ಪಶ್ಚಿಮ ಬಂಗಾಳ ಮತ್ತು ಟಿಎಂಸಿ ಪ್ರಮುಖ ಪಾತ್ರ ವಹಿಸಿವೆ ಎಂದು ಭರವಸೆ ಹೊಂದಿರುವುದಾಗಿ  ತಿಳಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا