Urdu   /   English   /   Nawayathi

ಸರ್ಜಿಕಲ್ ದಾಳಿಯನ್ನು ಪ್ರಧಾನಿ ಮೋದಿ 'ರಾಜಕೀಯ ಬಂಡವಾಳ' ಮಾಡಿಕೊಂಡಿದ್ದಾರೆ: ರಾಹುಲ್ ಗಾಂಧಿ

share with us

ನವದೆಹಲಿ: 08 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಅತಿಯಾದ ಪ್ರಚಾರ ಬೇಕಿರಲಿಲ್ಲ ಎನ್ನುವ ನಿವೃತ್ತ ಸೇನಾಧಿಕಾರಿ ಡಿ.ಎಸ್.ಹೂಡಾ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಇಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2016ರ ಸರ್ಜಿಕಲ್ ದಾಳಿಯನ್ನು ಪ್ರಧಾನಿ 'ರಾಜಕೀಯ ಬಂಡವಾಳ'ಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ದೂರಿದ್ದಾರೆ. ಚಂಡೀಗಢದಲ್ಲಿ ಶುಕ್ರವಾರ ನಡೆದ ಸೇನಾ ಸಾಹಿತ್ಯ ಉತ್ಸವ 2018ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಹೂಡಾ, ಸೇನೆ ನಡೆಸಿದ್ದ ಸೀಮಿತ ದಾಳಿ ಅತ್ಯಂತ ರಹಸ್ಯವಾಗಿತ್ತು. ಆದರೆ ಇದನ್ನು ಈಗ ಅತಿ ಹೆಚ್ಚು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದರು.

Rahul Gandhi✔@RahulGandhi

Spoken like a true soldier General. India is so proud of you. Mr 36 has absolutely no shame in using our military as a personal asset. He used the surgical strikes for political capital and the Rafale deal to increase Anil Ambani’s real capital by 30,000 Cr.

The Indian Express✔@IndianExpress

#ExpressFrontPage General S Hooda was moderating a discussion on the ‘Role of Cross-Border Operations and Surgical Strikes’ at the ongoing Military Literature Festival.http://bit.ly/2Pqp94F 
general-d-s-hooda-who-oversaw-operations-5483929/

10.7K

1:38 PM - Dec 8, 2018

Twitter Ads info and privacy

5,056 people are talking about this

Twitter Ads info and privacy

ಶನಿವಾರ ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ "ನಿಜವಾದ ಯೋಧನಂತೆ ಮಾತನಾಡಿದ ಜನರಲ್, ನಿಮ್ಮನ್ನು ರಾಷ್ಟ್ರವು ಹೆಮ್ಮೆಯಿಂಡ ನೋಡುತ್ತದೆ. ನಮ್ಮ ಮಿಲಿಟರಿಯನ್ನು ವೈಯಕ್ತಿಕ ಆಸ್ತಿಯಂತೆ ಬಳಸಿಕೊಳ್ಳುವುದಕ್ಕೆ ಮಿಸ್ಟರ್ 36 (ಮೋದಿ) ಗೆ ಯಾವ ನಾಚಿಕೆಯೂ ಇಲ್ಲ. "ಅವರು ಸರ್ಜಿಕಲ್ ದಾಳಿಯನ್ನು ರಾಜಕೀಯ ಬಂಡವಾಳಕ್ಕಾಗಿ ಹಾಗೂ ರಾಫೆಲ್ ಒಪ್ಪಂದವನ್ನು ಅನಿಲ್ ಅಂಬಾನಿಯ ನಿಜ ಬಂಡವಾಳ ಹೆಚ್ಚಿಸುವುದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂಬಾನಿ ನಿಜ ಬಂಡವಾಳ 30,000 ಕೋಟಿ" ಎಂದಿದ್ದಾರೆ. ಇದಕ್ಕೆ ಮುನ್ನ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಸಹ ಹೂಡಾ ವರ ಹೇಳಿಕೆಯನ್ನು ಸ್ವಾಗತಿಸಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا