Urdu   /   English   /   Nawayathi

ಸ್ವಾಗತಿಸುವ ವೇಳೆ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ಯುವಕ: ವಿಡಿಯೋ ವೈರಲ್

share with us

ಭೋಪಾಲ್: 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರನ್ನು ಸ್ವಾಗತಿಸುವ ವೇಳೆ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಮಧ್ಯಪ್ರದೇಶದ ನಗಾಡಾ ಕಚ್'ರೋಡ್'ಗೆ ಚುನಾವಣಾ ಪ್ರಚಾರ ಹಿನ್ನಲೆಯಲ್ಲಿ ಆಗಮಿಸಿದ್ದ ಬಿಜೆಪಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ದಿಲೀಪ್ ಶೆಖಾವತ್ ಅವರಿಗೆ ಯುವಕನೋರ್ವ ಚಪ್ಪಲಿ ಹಾರ ಹಾಕಿದ್ದಾನೆ.

ANI✔@ANI

: A man greets BJP MLA and candidate Dilip Shekhawat with
a garland of shoes in Madhya Pradesh's Nagada. (19.11.2018)

1,877

1:02 PM - Nov 20, 2018

1,152 people are talking about this

ಬಿಜೆಪಿ ಕಾರ್ಯಕರ್ತನ ಸೋಗಿನಲ್ಲಿ ಸ್ಥಳದಲ್ಲಿದ್ದ ಯುವಕ ಶಾಸಕನಿಗೆ ಚಪ್ಪಲಿ ಹಾರ ಹಾಕಿದ್ದಾನೆ. ಚಪ್ಪಲಿ ಹಾರ ಹಾಕಿದ ಕೂಡಲೇ ತೀವ್ರವಾಗಿ ಕೆಂಡಾಮಂಡಲಗೊಂಡ ಶಾಸಕ ಅದನ್ನು ಕಿತ್ತೆಸೆದು ಯುವಕನಿಗೆ ಥಳಿಸಿದ್ದಾರೆ. ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

https://youtu.be/pNLcHLxHr5E

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا