Urdu   /   English   /   Nawayathi

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮತ್ತೋರ್ವ ನಾಗರಿಕನ ಅಪಹರಣ, ಹತ್ಯೆ

share with us

ಶ್ರೀನಗರ: 18 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಇಬ್ಬರು ನಾಗರಿಕರನ್ನು ಅಪಹರಣ ಮಾಡಿ ಹತ್ಯೆಗೈದಿದ್ದಾರೆ. ನಿನ್ನೆಯಷ್ಟೇ ಪುಲ್ವಾಮದಲ್ಲಿ ಓರ್ವನ ಅಪಹರಣ ಮಾಡಿ ಹತ್ಯೆಗೈದಿದ್ದ ಉಗ್ರರಿಂದ ಮತ್ತೊಮ್ಮೆ ಅಂತಹುದೇ ಕೃತ್ಯ ನಡೆದಿದ್ದು, ಇಂದು ಶೋಪಿಯಾನ್ ನಲ್ಲಿ ಕೇವಲ 19 ವರ್ಷದ ಯುವಕನನ್ನು ಅಪಹರಿಸಿ ಕತ್ತು ಸೀಳಿ ಕೊಂದು ಹಾಕಿದ್ದಾರೆ.

ಮೂಲಗಳ ಪ್ರಕಾರ ಈ ಇಬ್ಬರೂ ಸೇನೆಗೆ ಉಗ್ರರ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂಬ ಶಂಕೆಯ ಮೇರೆಗೆ ಉಗ್ರರು ಇವರನ್ನುಕೊಂದು ಹಾಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸೇನೆಗೆ ನೆರವು ನೀಡುವ ಅಥವಾ ಸೇನೆಗೆ ಮಾಹಿತಿ ನೀಡುವ ಎಲ್ಲರನ್ನೂ ಕೊಂದು ಹಾಕುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಮೃತನನ್ನು 19 ವರ್ಷದ ಹುಜೈಫ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಕುಲಗಾಮ್ ನ ಮಂಜಗಾಮ್ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ.

ನಿನ್ನೆಯಷ್ಟೇ ಪುಲ್ವಾಮ ಜಿಲ್ಲೆಯ ಸೈದಾಪೋರಾದಲ್ಲಿ ನದೀಮ್ ಮಂಜೂರ್ ಎಂಬಾತನನ್ನು ಆತನ ಮನೆಯಿಂದಲೇ ಅಪಹರಣ ಮಾಡಿದ್ದ ಉಗ್ರರು ಆತನನ್ನು ಭೀಕರವಾಗಿ ಕೊಂದು ಹಾಕಿದ್ದರು. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا